ಬೈಕ್ ಅಪಘಾತದಲ್ಲಿ ಮೃತ ಉಪನ್ಯಾಸಕನ ಕುಟುಂಬಕ್ಕೆ 97 ಲಕ್ಷ ರೂ ಪರಿಹಾರ ನೀಡಲು ಕೋರ್ಟ್ ಆದೇಶ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಬೈಕ್ ಅಪಘಾತದಲ್ಲಿ ಮೃತಪಟ್ಟ ಇಂಜನಿಯರಿಂಗ್ ಕಾಲೇಜಿನ ಉನ್ಯಾಸಕರೊಬ್ಬರಿಗೆ ವಿಮಾ ಕಂಪೆನಿ 97 ಲಕ್ಷದ 95 ಸಾವಿರ ರೂ ಪರಿಹಾರ ನೀಡುವಂತೆ ಪುತ್ತೂರಿನ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ.

2012 ಅಕ್ಟೋಬರ್ 15ರಂದು ಕಬಕ ಗ್ರಾಮದ ಕುವೆತ್ತಿಲ ಎಂಬಲ್ಲಿ ಈ ಅಪಘಾತ ನಡೆದಿತ್ತು. ಅಪಘಾತದಲ್ಲಿ ಬೈಕ್ ಸವಾರನಾಗಿದ್ದ ಉಪನ್ಯಾಸಕ ಮೃತಪಟ್ಟಿದ್ದರು. ಮೃತಪಟ್ಟ ಬಳಿಕ ಅವರ ಕುಟುಂಬಸ್ಥರು ವಿಮಾ ಪರಿಹಾರ ಕೋರಿ ಪುತ್ತೂರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಕುಟುಂಬಸ್ಥರು ಒಂದು ಕೋಟಿ ರೂ ಪರಿಹಾರ ನೀಡುವಂತೆಯೂ ಅರ್ಜಿಯಲ್ಲಿ ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮೃತ ಉಪನ್ಯಾಸಕನ ಕುಟುಂಬಕ್ಕೆ ಭಾರೀ ಮೊತ್ತದ ಪರಿಹಾರವನ್ನು ನೀಡುವಂತೆ ವಿಮಾ ಕಂಪೆನಿಗೆ ಆದೇಶ ನೀಡಿದೆ.

ಉಪನ್ಯಾಸಕರು ಅವರ ವೇತನ, ವಿದ್ಯಾಭ್ಯಾಸ, ಅವಲಂಬಿತರ ಸಂಖ್ಯೆ, ಉದ್ಯೋಗದ್ದಲ್ಲಿ ಪದೋನ್ನತಿ ಸಾಧ್ಯತೆ ಮತ್ತು ನಿವೃತ್ತಿ ಬಳಿಕದ ವೇತನ ಇದೆಲ್ಲವನ್ನೂ ಪರಿಗಣಿಸಿದ ನ್ಯಾಯಾಲಯ ಕುಟುಂಬಸ್ಥರಿಗೆ 97 ಲಕ್ಷದ 95 ಸಾವಿರ ರೂ ವಿಮಾ ಪರಿಹಾರ ನೀಡುವಂತೆ ಆದೇಶ ನೀಡಿದೆ.

ದ ಕ ಜಿಲ್ಲೆಯಲ್ಲಿ ಭಾರೀ ಮೊತ್ತದ ಪರಿಹಾರ ಇದೇ ಮೊದಲ ಬಾರಿ ಎನ್ನಲಾಗಿದೆ.