ಬೈಕ್ ಮುಖಾಮುಖಿ : ದಂಪತಿ ಆಸ್ಪತ್ರೆಗೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಬೈಕುಗಳ ಮುಖಾಮುಖಿ ಡಿಕ್ಕಿಯಿಂದ ದಂಪತಿ ಗಾಯಗೊಂಡ ಘಟನೆ ಮುಡಾರು ಗ್ರಾಮದ ಅಡ್ಯಾಲು ಎಂಬಲ್ಲಿ ನಡೆದಿದೆ.

ಅಡ್ಯಾಲು ನಿವಾಸಿ ಕೇಶವ ಆಚಾರ್ಯ (30) ಹಾಗೂ ಅವರ ಪತ್ನಿ ಯಶೋಧರ (23) ಎಂಬವರು ಗಾಯಗೊಂಡವರು. ಕೇಶವ ಆಚಾರ್ಯ ಬುಧವಾರ ಮಧ್ಯಾಹ್ನ ತನ್ನ ಪತ್ನಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಬಜಗೋಳಿ ಕಡೆಗೆ ಹೋಗುತ್ತಿದ್ದಾಗ, ಬಜಗೋಳಿಯಿಂದ ಅಡ್ಯಾಲಿಗೆ ಬರುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಅಪಘಾತದಿಂದ ಗಾಯಗೊಂಡ ಕೇಶವ ಆಚಾರ್ಯ ಹಾಗೂ ಯಶೋಧರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.