ಎಂಡೋಪೀಡಿತರ ಶಾಲೆಗೆ ಕೊಡುಗೆ ನೀಡಿ ಹುಟ್ಟುಹಬ್ಬ ಆಚರಿಸಿದ ಕುಟುಂಬ

 

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಆಧುನಿಕತೆ ಬೆಳೆದಂತೆಲ್ಲ ಆಚರಣೆ, ಪರಂಪರೆ ಮರೆತು ಪಾಶ್ಚಿಮಾತ್ಯದ ಅನುಕರಣೆಯಲ್ಲಿರುವ ಮಧ್ಯೆ ಇಲ್ಲೊಂದು ಕುಟುಂಬ ತಮ್ಮ ಮಗುವಿನ ಜನ್ಮ ದಿನಾಚರಣೆಯನ್ನು ಎಂಡೋಪೀಡಿತ ಮಕ್ಕಳ ವಿಶೇಷ ಬಡ್ಸ್ ಶಾಲೆಗೆ ಆಹಾರ ದಾಸ್ತಾನು ಇಡುವ ವಿಶೇಷ ವಸ್ತುಗಳನ್ನು ಕೊಡುಗೆಯಾಗಿ ನೀಡಿ ವಿಶಿಷ್ಟತೆ ಮೆರೆದ ಘಟನೆ ಪೆರ್ಲದಲ್ಲಿ ಶ್ಲಾಘನೆಗೊಳಗಾಯಿತು.

ಪೆರ್ಲದ ಶಾರ್ಜ ಉದ್ಯೋಗಿ ಸಂತೋಷ್ ಕುಮಾರ್ ಖಂಡಿಗೆ ಮತ್ತು ಡಾ ಅಕ್ಷತಾ ಎಸ್ ಬಿ ಅವರ ಮಗು ಸಾಂಕ್ಷಿತನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದು ಇತರರಿಗೆ ಮಾದರಿ ಆಗಿದೆ. ಪೆರ್ಲ ಬಳಿಯ ಕನ್ನಟಿಕಾನ ಸಮೀಪದ ಎಂಡೋಸಲ್ಫಾನ್ ಪೀಡಿತ ಮಕ್ಕಳ ವಿದ್ಯಾ ಕೇಂದ್ರದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್ ಮಾತಾಡಿ, “ನಮ್ಮಲ್ಲಿ ಹುಟ್ಟುಹಬ್ಬ, ಮದುವೆ ಇನ್ನಿತರ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಚರಿಸಿ ಆಹಾರ ಪದಾರ್ಥವನ್ನು ಹಾಳುಗೆಡಹುತ್ತೇವೆ. ಈ ಮಧ್ಯೆ ಸಮಾಜದಲ್ಲಿ ಸಂಕಷ್ಟದಲ್ಲಿರುವ ದೀನರ ಬಗ್ಗೆ ಪ್ರಜ್ಞೆಯಿಲ್ಲದವರಂತೆ ವರ್ತಿಸುತ್ತೇವೆ. ಆದರೆ ಸಂತೋಷ್ ಕುಮಾರ್-ಡಾ ಅಕ್ಷತಾ ಅವರು ತೋರಿಸಿಕೊಟ್ಟ ಕಾರ್ಯಕ್ರಮ ಉಳಿದವರಿಗೂ ಪ್ರೇರಣೆ, ಸ್ಪೂರ್ತಿದಾಯಕವಾಗುವುದರೊಂದಿಗೆ  ಸದಾಶಯದ ಇಂತಹ ಕ್ರಮಗಳನ್ನು ಇನ್ನಷ್ಟು ವಿಸ್ತರಿಸಿ ಪೆÇ್ರೀತ್ಸಾಹಿಸಬೇಕು” ಎಂದು ಹಾರೈಸಿದರು.

 

LEAVE A REPLY