ಹಣ ಹಿಂತಿರುಗಿಸುವಂತೆ ಕೊಲೆ ಬೆದರಿಕೆಯೊಡ್ಡಿದ್ದ ದಂಪತಿ ವಿರುದ್ಧ ಕೇಸು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಹಣಕಾಸಿನ ವಿಚಾರದಲ್ಲಿ ವ್ಯಕ್ತಿಯೊಬ್ಬನಿಗೆ ಜೀವ ಬೆದರಿಕೆಯೊಡ್ಡಿದ ದಂಪತಿ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಡಗಮಿಜಾರಿನ ಹರೀಶ್ ನಾಯಕ್ ಎಂಬವರು ಮೂಡುಬಿದಿರೆಯ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಯೋಗಿತಾ ಶೆಟ್ಟಿ ಅವರಿಂದ ರೂ 1.65 ಲಕ್ಷ ಹಣ ಸಾಲ ಪಡೆದಿದ್ದರು. ಪ್ರತಿ ತಿಂಗಳು ಶೇಕಡಾ 10ರ ಬಡ್ಡಿ ಹಾಗೂ ಅಸಲನ್ನು ಕಂತು ರೂಪದಲ್ಲಿ ಹಿಂತಿರುಗಿಸುವುದಾಗಿ ಹರೀಶ್ ತಿಳಿಸಿದ್ದರು. ಆದರೆ ಹರೀಶಗೆ ಹಣ ಹಿಂತಿರುಗಿಸು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಹಣ ನೀಡದಿದ್ದಾಗ ಯೋಗಿತಾ ಮತ್ತು ಅವರ ಪತಿ ಬಾಲಕೃಷ್ಣ ಅವರು ಹರೀಶ್ ಮನೆಗೆ ಹೋಗಿ ರೂ 1.65 ಲಕ್ಷ ಅಸಲು ಹಣಕ್ಕೆ 3.50 ಲಕ್ಷ ರೂ ಸೇರಿಸಿ ಕೊಡಬೇಕೆಂದು ಒತ್ತಡ ಹಾಕಿ ಜೀವ ಬೆದರಿಕೆಯೊಡ್ಡಿ ತೆರಳಿದ್ದಾರೆನ್ನಲಾಗಿದೆ. ಈ ಬಗ್ಗೆ ಹರೀಶ್ ನಾಯಕ್ ನೀಡಿದ ದೂರಿನ ಮೇರೆಗೆ ಪೊಲೀಸರು ದಂಪತಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY