ಮಂಜೇಶ್ವರ ವಿದ್ಯುತ್ ಕಚೇರಿಯಲ್ಲಿ ಲಂಚ

  ಯೂತ್ ಲೀಗ್ ಆರೋಪ ಪ್ರತಿಭಟನಾ ಧರಣಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ದೂರು ನೀಡಲು ಹೋದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿರುವುದನ್ನು ಪ್ರಶ್ನಿಸಿದ ಯೂತ್ ಲೀಗ್ ಕಾರ್ಯಕರ್ತನ ವಿರುದ್ಧ ವಿದ್ಯುತ್ ಸಿಬ್ಬಂದಿ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿ ಜಾಮೀನುರಹಿತ ಕೇಸಿನಲ್ಲಿ ಸಿಲುಕಿಸಿರುವ ಘಟನೆಯನ್ನು ಪ್ರತಿಭಟಿಸಿ ವಿದ್ಯುತ್ ಕಚೇರಿ ವಿರುದ್ಧ ಯೂತ್ ಲೀಗ್ ಮಂಜೇಶ್ವರ ಪಂಚಾಯತ್ ಸಮಿತಿ ಮಂಗಳವಾರ ಪ್ರತಿಭಟನಾ ಧರಣಿ ನಡೆಸಿತು.

ಮಂಜೇಶ್ವರ ಸಬ್ ರಿಜಿಸ್ಟ್ರಾರ್ ಕಚೇರಿ ಮುಂಭಾಗದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯನ್ನು ವಿದ್ಯುತ್ ಕಚೇರಿ ಮುಂಭಾಗದಲ್ಲಿ ಪೆÇಲೀಸರು ತಡೆದರು. ಬಳಿಕ ನಡೆದ ಧರಣಿಯನ್ನು ಯೂತ್ ಲೀಗ್ ರಾಜ್ಯ ಕಾರ್ಯದರ್ಶಿ ಎ ಕೆ ಎಂ ಅಶ್ರಫ್ ಉದ್ಘಾಟಿಸಿದರು.

“ವಿದ್ಯುತ್ ಸಂಸ್ಥೆ ಸಾಮಾನ್ಯ ಜನತೆ ಸಂಪರ್ಕಿಸುವ ಒಂದು ಕಚೇರಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಯ ಸಿಬ್ಬಂದಿಗಳು ಲಂಚಕ್ಕಾಗಿ ಗ್ರಾಹಕರನ್ನು ಪೀಡಿಸುತ್ತಿರುವ ಜತೆ ರಾಜಕೀಯ ದರ್ಪವನು ತೋರಿಸುತಿದ್ದಾರೆ. ನಮ್ಮ ಪಕ್ಷದ ಯುವಕನನ್ನು ಕೇಸು ದಾಖಲಿಸಿ ಬೆದರಿಸುವುದಾದರೆ ಅದಕ್ಕೆ ಹೆದರುವುದಿಲ್ಲ. ಕಚೇರಿಯಲ್ಲಿ ನಡೆಯುತ್ತಿರುವ ಲಂಚ ಪೀಡನೆಯ ವಿರುದ್ಧ ವಿಜಿಲೆನ್ಸಿಗೆ ದೂರು ನೀಡುತ್ತೇವೆ” ಎಂದು ಅಶ್ರಫ್ ಹೇಳಿದರು.