ರಾಜ್ಯದಲ್ಲಿ 21 ಸಾವಿರ ಪೊಲೀಸ್ ನೇಮಕ ಪರಮೇಶ್ವರ್

ಜಿ ಪರಮೇಶ್ವರ

ನಮ್ಮ ಪ್ರತಿನಿಧಿ ವರದಿ
ಮಂಗಳೂರು : “ರಾಜ್ಯದಲ್ಲಿ 25 ಸಾವಿರ ಪೊಲೀಸ್ ಸಿಬ್ಬಂದಿಯ ಅಗತ್ಯವಿದ್ದು, 21,000 ಪೇದೆಗಳ ನೇಮಕ ಪ್ರಕ್ರಿಯೆ ಜಾರಿಯಲ್ಲಿದೆ. ಈ ಪೈಕಿ 16,000 ಸಿಬ್ಬಂದಿ ನೇಮಕಾತಿಯಾಗಿ ಶೇ 70ರಷ್ಟು ಪೊಲೀಸರು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ನಗರದಲ್ಲಿ ಪೊಲೀಸ್ ಗಸ್ತು ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
“ಪೊಲೀಸರಿಗೆ ನೀಡಬೇಕಾದ ಬಡ್ತಿ, ವೇತನ, ಭತ್ತೆಯನ್ನು ನೀಡಲಾಗುವುದು. 10 ವರ್ಷಗಳಲ್ಲಿ ಬಡ್ತಿಯನ್ನು ಪಡೆಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಇವರಿಗೆ ಜನವರಿಯಿಂದ 2000 ರೂ ಹೆಚ್ಚು ಬತ್ತೆಯನ್ನು ನೀಡಲಾಗುವುದು” ಎಂದರು.
“ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ 18-20 ವಯಸ್ಸಿನ ಆಯ್ದ ಪೊಲೀಸರು ಗರುಡ ಫೋರ್ಸಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ” ಎಂದರು.