ಅನಧಿಕೃತ ಮರಳು ಪೊಲಿಸ್ ವಶಕ್ಕೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಅನಧಿಕೃತವಾಗಿ ಪಿಕಪ್ ವಾಹನದಲ್ಲಿ  ಸಾಗಾಟ ಮಾಡುತಿದ್ದ ಹೊಳೆಯ ಮರಳನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಸಂದರ್ಭ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿರುವುದಾಗಿ ಹೇಳ ಲಾಗಿದೆ.

ರವಿವಾರ ಮುಂಜಾನೆ ಮುಟ್ಟಂ ಗೇಟ್ ಪರಿಸರದಲ್ಲಿ ಪೆÇಲೀಸರು ನಡೆಸಿದ ಕಾರ್ಯಾಚರಣೆಲ್ಲಿ ಮರಳನ್ನು ವಶಕ್ಕೆ ತೆಗೆಯಲಾಗಿದೆ. ಮರಳು ಸಹಿತ ಪಿಕಪ್ ವಾಹನವನ್ನು ಕುಂಬಳೆ ಠಾಣೆಗೆ ಒಯ್ಯಲಾಗಿದೆ. ಪರಾರಿಯಾದ ಚಾಲಕನ ವಿರುದ್ದ ಕೇಸು ದಾಖಲಿಸಲಾಗಿದೆ.