ಟ್ರಾಫಿಕ್ ಪೆÇೀಲಿಸರಿಂದ ಮುಲ್ಕಿ ಸಂಚಾರಿ ಸಮಸ್ಯೆ ಪರಿಶೀಲನೆ

ಮುಲ್ಕಿ : ರಾಷ್ತ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಮುಲ್ಕಿ ಪೇಟೆಯಲ್ಲಿ ಸಂಚಾರ ಸಮಸ್ಯೆ ಹೆಚ್ಚುತ್ತಿದ್ದು ಈ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಪೆÇೀಲಿಸ್ ಠಾಣಾ ನಿರೀಕ್ಷಕ ಮಂಜುನಾಥ್ ಅವರು ಮುಲ್ಕಿಗೆ ಆಗಮಿಸಿ ಮುಲ್ಕಿಯ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿದರು.

ಮುಲ್ಕಿ ಬಸ್ ನಿಲ್ದಾಣದ ಬಳಿ ರಿಕ್ಷಾ ಮತ್ತು ಕಾರುಗಳನ್ನು ಸರ್ವಿಸ್ ರಸ್ತೆಗಳಲ್ಲಿ ಮತ್ತು ಅಲ್ಲಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಸಮಸ್ಯೆಯಾಗುತ್ತಿರುವ ತಿಳಿಸಿದಾಗ ಮುಲ್ಕಿ ಬಸ್ ನಿಲ್ದಾಣದ ಬಳಿಯ ಸರ್ವಿಸ್ ರಸ್ತೆಯಲ್ಲಿ ಪಾರ್ಕಿಂಗಿಗೆ ಅವಕಾಶ ನೀಡದೆ ಕಿನ್ನಿಗೋಳಿ ಕಡೆಗೆ ಹೋಗುವ ಬಸ್ಸುಗಳು ಹಾಗೂ ಇತರ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಚಲಿಸುವಂತೆ ಆದೇಶಿಸಿದ್ದಾರೆ. ಮುಲ್ಕಿಯ ವಿಜಯ ಬ್ಯಾಂಕ್ ಎದುರಗಡೆಯ ಜಾಗದಲ್ಲಿ ರಿಕ್ಷಾಗಳು ಪಾರ್ಕಿಂಗ್ ಮಾಡುವ ಬಗ್ಗೆ ಹಾಗೂ ಮುಲ್ಕಿಯ ಪುನರೂರು ಕಾಂಪ್ಲೆಕ್ಸ್ ಬಳಿಯ ಶಿವಾಜಿ ಮಂಟಪದ ಎದುರುಗಡೆ ಕಾರುಗಳು ಪಾರ್ಕಿಂಗ್ ಮಾಡುವ ಬಗ್ಗೆ ಆದೇಶಿಸಿದ್ದಾರೆ.