ಮದ್ಯ ಸೇವಿಸಿ ಹೆದ್ದಾರಿ ಬದಿ ಬಿದ್ದವನ ರಕ್ಷಿಸಿದ ಪೊಲೀಸ್

ಹೆದ್ದಾರಿ ಬದಿ ಬಿದ್ದವನ ಎತ್ತುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಬಳಿ ವಿಪರೀತ ಮದ್ಯ ಸೇವಿಸಿ ಬಿದ್ದ ವ್ಯಕ್ತಿಯನ್ನು ಮುಲ್ಕಿ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮುಲ್ಕಿ ಸಮೀಪದ ಚಿತ್ರಾಪು ನಿವಾಸಿ ಯೋಗೀಶ್ ಎಂಬಾತ ವೃತ್ತಿಯಲ್ಲಿ ಪೈಂಟರ್ ಆಗಿದ್ದು, ಕಳೆದೆರಡು ದಿನಗಳಿಂದ ಹೆದ್ದಾರಿಯಲ್ಲಿ ವಿಪರೀತ ಮದ್ಯ ಸೇವಿಸಿ ತೂರಾಡಿಕೊಂಡು ಬಿದ್ದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಸ್ ನಿಲ್ದಾಣ ಬಳಿಯ ಹೆದ್ದಾರಿ ಅಪಾಯಕಾರಿಯಾಗಿದ್ದು, ಈತ ಹೆದ್ದಾರಿ ಬದಿಯ ಡಿವೈಡರ್ ಬಳಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಮುಲ್ಕಿ ಠಾಣೆಗೆ ತಿಳಿಸಿದ್ದರು. ಕೂಡಲೇ ಪೊಲೀಸರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.