ತೊಕ್ಕೊಟ್ಟು ಲಾಡ್ಜಿನಲ್ಲಿ ಅನ್ಯಕೋಮು ಜೋಡಿ

ಸಾಂದರ್ಭಿಕ ಚಿತ್ರ

ಪೊಲೀಸರ ದಾಳಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೊರವಲಯದ ಉಳ್ಳಾಲ ತೊಕ್ಕೊಟ್ಟಿನಲ್ಲಿರುವ ಲಾಡ್ಜಿನಲ್ಲಿ ಅನ್ಯಕೋಮಿನ ಜೋಡಿ ಇದ್ದ ಬಗ್ಗೆ ಮಾಹಿತಿ ಪಡೆದ ಪರಿವಾರ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರು ದಾಳಿ ನಡೆಸುವಷ್ಟರಲ್ಲಿ ಜೋಡಿ ಅಲ್ಲಿಂದ ಪರಾರಿಯಾಗಿದೆ.

ತೊಕ್ಕೊಟ್ಟು ಜಂಕ್ಷನಿನಲ್ಲಿರುವ ಲಾಡ್ಜಿನಲ್ಲಿ ಬುಧವಾರ ರಾತ್ರಿ ಅನ್ಯಧರ್ಮದ ಜೋಡಿ ಮಜಾ ಉಡಾಯಿಸಲೆಂದು ಬಂದಿದೆ ಎಂಬ ಮಾಹಿತಿ ಸ್ಥಳೀಯ ಪರಿವಾರ ಸಂಘಟನೆ ಕಾರ್ಯಕರ್ತರಿಗೆ ಸಿಕ್ಕಿದೆ. ಕಾಸರಗೋಡು ಮೂಲದ ರಿಯಾಝ್ ಎಂಬಾತ ಮಂಜೇಶ್ವರದ ಅನ್ಯಧರ್ಮದ ಹುಡುಗಿ ಜೊತೆಗೆ ಲಾಡ್ಜಿಗೆ ಬಂದಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಅರಿತ ಉಳ್ಳಾಲ ಪೊಲೀಸರು ಗುರುವಾರ ಬೆಳ್ಳಂಬೆಳಿಗ್ಗೆ ಲಾಡ್ಜಿಗೆ ದಾಳಿ ನಡೆಸಿದ್ದಾರೆ.

ಆದರೆ ದಾಳಿ ಸುಳಿವು ಪಡೆದ ಜೋಡಿ ಬೆಳ್ಳಂಬೆಳಿಗ್ಗೆ ಲಾಡ್ಜನ್ನು ಖಾಲಿ ಮಾಡಿ ಎಸ್ಕೇಪ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ. ಉಳ್ಳಾಲ ಠಾಣಾಧಿಕಾರಿಗೆ ಮಾಹಿತಿ ಸಿಕ್ಕಿದ ತಕ್ಷಣ ಅವರು ಲಾಡ್ಜಿಗೆ ತೆರಳಿ ತನಿಖೆ ನಡೆಸಿದ್ದಾರೆ. ಆದರೆ ಲಾಡ್ಜ್ ಸಿಬ್ಬಂದಿ ಕೂಡಾ ಹೆಚ್ಚಿನ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.