`ಪುಲಿಮುರುಗನ್’, `ಒಪ್ಪಂ’ ಚಿತ್ರಗಳ ನಕಲಿ ಪ್ರತಿ ಮಾರಾಟ ; ಅಂಗಡಿಗಳಿಗೆ ಪೆÇಲೀಸ್ ದಾಳಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮಲಯಾಳ ಚಲನಚಿತ್ರ ರಂಗದಲ್ಲಿ 150 ಕೋಟಿ ರೂಪಾಯಿಗಿಂತಲೂ ಅಧಿಕ ಗಳಿಕೆ ಪಡೆದು ಹೊಸ ದಾಖಲೆ ಸ್ಥಾಪಿಸಿದ `ಪುಲಿಮುರುಗನ್’ ಮತ್ತು `ಒಪ್ಪಂ’ ಚಿತ್ರಗಳ ನಕಲಿ ಪ್ರತಿ ಮಾಡಿ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಪೆÇಲೀಸರು ದಾಳಿ ನಡೆಸಿದರು.

ದಾಳಿಯಲ್ಲಿ ಎರಡು ಚಿತ್ರಗಳ ನಕಲಿ ಪ್ರತಿಗಳನ್ನೊಳಗೊಂಡ ಪೆನ್ ಡ್ರೈವುಗಳು ಮತ್ತು ಅದಕ್ಕಾಗಿ ಬಳಸಲಾಗುತ್ತಿದ್ದ ಕಂಪ್ಯೂಟರುಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.