ಮದನಿ ಬೆಂಬಲಿಗರ ರಾಜ್ಯ ಪ್ರವೇಶ ತಡೆದ ಪೊಲೀಸರು

ಮೈಸೂರು : ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ಅಬ್ದುಲ್ ನಾಸಿರ್ ಮದನಿಯ ನೂರಾರು ಬೆಂಬಲಿಗರು ಕರ್ನಾಟಕ ಪ್ರವೇಶಿಸುವ ಯತ್ನವನ್ನು ರಾಜ್ಯ ಪೊಲೀಸರು ಗುಂಡ್ಲುಪೇಟೆ ಗಡಿಯಲ್ಲಿ ವಿಫಲಗೊಳಿಸಿದ್ದಾರೆ.

ತಮ್ಮ ನಾಯಕನನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಪಿಡಿಪಿಯ ನೂರಾರು ಬೆಂಬಲಿಗರು ಪಥಸಂಚಲನದೊಂದಿಗೆ ಕರ್ನಾಟಕ ಗಡಿಯತ್ತ ಬಂದಿದ್ದರು. ನಾಸಿರನನ್ನು ಅಕ್ರಮವಾಗಿ ಕೂಡಿ ಹಾಕಲಾಹಿದೆ ಎಂದು ಪಿಡಿಪಿ ಕಾರ್ಯಕರ್ತರು ಆರೋಪಿಸಿದ್ದಾರೆ.ಪಿಡಿಪಿ ಬೆಂಬಲಿಗರ ರಾಜ್ಯ ಪ್ರವೇಶದಿಂದ ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾಗಲಿದೆÀ ಎಂಬ ಕಾರಣದಿಂದ ಇವರನ್ನು ತಡೆಯಲು ಗಡಿಯಲ್ಲಿ ಪೊಲೀಸ್ ಕಾವಲು ಇರಿಸಲಾಗಿದೆ ಎಂದು ಚಾಮರಾಜನಗರ ಪೊಲೀಸ್ ಅಧೀಕ್ಷಕ ಕುಲ್ದೀಪ್ ಕುಮಾರ್ ತಿಳಿಸಿದರು.

ಗುಂಡ್ಲುಪೇಟೆಯಲ್ಲಿ ಕೇರಳದಿಂದ ಕರ್ನಾಟಕದೊಳಗೆ ಎನ್ ಎಚ್ 212ರ ಮೂಲಕ ಪ್ರವೇಶಿಸಬಹುದಾದ ಸುಲಭ ಮಾರ್ಗವಾಗಿದ್ದು, ಅಲ್ಲಿ ಭಾರೀ ಪೊಲೀಸ್ ತುಕಡಿ ವ್ಯವಸ್ಥೆಗೊಳಿಸಲಾಗಿದೆ. ಇದು ಬಂಡೀಪುರ ಹುಲಿ ಮೀಸಲುಧಾಮ ಪ್ರದೇಶಕ್ಕೆ ಹೊಂದಿಕೊಂಡಿದೆ.

ಸುಪ್ರೀಂ ಕೋರ್ಟ್ ಮದನಿಯ ಪ್ರಕರಣ ತುರ್ತಾಗಿ ವಿಚಾರಣೆ ನಡೆಸಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರೂ, ತಮ್ಮ ನಾಯಕನ ಬಾಂಬ್ ಸ್ಫೋಟ ಆರೋಪ ಪ್ರಕರಣದ ವಿಚಾರಣೆ ವಿಳಂಬವಾಗಿದೆ. ಆದ್ದರಿಂದ ಮದನಿಗೆ ನಿಯಮಿತ ಜಾಮೀನು ನೀಡಿ ಬಿಡಗಡೆಗೊಳಿಸಬೇಂದು ಪಿಡಿಪಿ ಬೆಂಬಲಿಗರು ಆಗ್ರಹಿಸಿದ್ದಾರೆ. ಪಿಡಿಪಿ ಕಾರ್ಯಕರ್ತರ ಮಾರ್ಚಿಯಿಂದ ಸಮಸ್ಯೆ ಉಂಟಾಗಬಹುದೆಂಬ ಶಂಕೆಯಿಂದ ಗುಂಡ್ಲುಪೇಟೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.