ಆರೋಪಿಗಳ ಬಂಧಿಸದಂತೆ ಪೊಲೀಸರ ಮೇಲೆ ಒತ್ತಡ : ಶಂಭು ಶರ್ಮ ಆರೋಪ

ಬೆಂಗಳೂರು : “ಹೊಸನಗರ ರಾಮಚಂದ್ರಾಪುರದ ರಾಘವೇಶ್ವರ ಸ್ವಾಮೀಜಿಗೆ  ಬ್ಲಾಕ್ಮೇಲ್ ಮಾಡಿದ ಪ್ರಕರಣದ ಆರೋಪಿಗಳನ್ನು ಬಂಧಿಸದಂತೆ  ಹೊನ್ನಾವರ ಎಸ್ಸೈ ಮೇಲೆ ಒತ್ತಡ ಹೇರುವ ಸಲುವಾಗಿ ಅವರನ್ನು ಬೆಂಗಳೂರಿಗೆ ಕರೆಸಿ ಬೆದರಿಕೆ ಹಾಕಲಾಗಿದೆ” ಎಂದು ಮಠದ ವಕೀಲ ಶಂಭು ಶರ್ಮ ಹೇಳಿದ್ದಾರೆ.

ಸ್ವಾಮಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ ಮಠದ ಗಾಯಕಿಯಾಗಿದ್ದ ಪ್ರೇಮಲತಾ ಮತ್ತಾಕೆಯ ಪತಿ ದಿವಾಕರ ಶಾಸ್ತ್ರಿ ಅವರು ಸ್ವಾಮಿಗೆ “ಬ್ಲಾಕ್ಮೇಲ್ ಮಾಡುತ್ತಿದ್ದಾರಲ್ಲದೆ ಪಠದ ರಾಮಕಥಾ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಇತರ ಗಾಯಕರಿಗೆ ಬೆದರಿಕೆಯೊಡ್ಡುತ್ತಿದ್ದಾರೆ”ಎಂದು ಆರೋಪಿಸಿ  ಬಿ ಆರ್ ಚಂದ್ರಶೇಖರ್ ಎಂಬವರು ದೂರು ದಾಖಲಿಸಿದ್ದರೆ ಇದೀಗ ತನಿಖೆ ನಡೆಸಿರುವ ಪೊಲೀಸರು ಸಾಕ್ಷ್ಯಾಧಾರದ ಕೊರತೆಯ ನೆಪದಲ್ಲಿ  `ಬಿ’ ರಿಪೋರ್ಟ್ ಸಲ್ಲಿಸಲು ಯತ್ನಿಸುತ್ತಿದ್ದಾರೆ ಎಂದು ಶರ್ಮ ಆರೋಪಿಸಿದ್ದಾರೆ.

“ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸಾಕ್ಷಾಧಾರಗಳಿದ್ದ ಹೊರತಾಗಿಯೂ ಕೆಲ ಬಾಹ್ಯ ಶಕ್ತಿಗಳ ಒತ್ತಡಕ್ಕೆ ಮಣಿದು ಪೊಲೀಸರು `ಬಿ’ ರಿಪೋರ್ಟ್ ಸಲ್ಲಿಸಿದ್ದೇ ಆದಲ್ಲಿ   ಮಠವು ಕಾನೂನು ಹೋರಾಟ ನಡೆಸುವುದು ಎಂದು ಶರ್ಮ ಸದ್ದಿಗಾರರೊಂದಿಗೆ  ಮಾತನಾಡುತ್ತಾ ಹೇಳಿದರು.