ಅಕ್ರಮ ಮರಳು ದಂಧೆ : ಪೊಲೀಸರ ಮೇಲೆ ಆರೋಪ ಸಲ್ಲ ಎಂದ ಐಜಿಪಿ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : “ಅಕ್ರಮ ಮರಳುಗಾರಿಕೆಗೂ ಪೊಲೀಸ್ ಇಲಾಖೆಗೂ ಸಂಬಂಧವೇ ಇಲ್ಲ. ಹಾಗಾಗಿ ಪೊಲಿಸರ ಮೆಲಿನ ಆರೋಪಗಳು ಸುಳ್ಳು. ಅಕ್ರಮ ಮರಳುಗಾರಿಕೆಗೆ ಗಣಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ನೆರ ಹೊಣೆ” ಎಂದು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಹೇಳಿದ್ದಾರೆ.

ಕುಂದಾಪುರದ ಡಿವೈಎಸ್ಪಿ ಕಚೆರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, “ಯಾವುದೇ ಇಲಾಖೆಗಳು ದಾಳಿ ನಡೆಸಿದಾಗ ಪೊಲೀಸರು ಸಹಕಾರ ಕೇಳುತ್ತಾರೆ. ಅಂಥ ಸಂದರ್ಭದಲ್ಲಿ ಪೊಲೀಸರು ರಕ್ಷಣೆಯನ್ನಷ್ಟೇ ಕೊಡುತ್ತಾರೆ. ಯಾವುದೇ ಇಲಾಕೆಗೆ ಸಂಬಂಧಿಸಿದ ಕೆಲಸಗಳಲ್ಲಿ ಪೊಲಿಸರು ಮೂಗು ತೂರಿಸುವುದು ಅಸಾಧ್ಯ ಹಾಗಾಗಿ ಕರಾವಳಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ಹೊಣೆಯನ್ನು ಪೊಲೀಸರ ತಲೆಗೆ ಕಟ್ಟುವುದು ಸರಿಯಲ್ಲ” ಎಂದರು.

“ಜಿಲ್ಲಾಧಿಕಾರಿಗಳ ಮೇಲಿನ ಹಲ್ಲೆ ಹಾಗೂ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ 21 ಜನರನ್ನು ಬಂಧಿಸಲಾಗಿದ್ದು, ವಾರದೊಳಗೆ ಇತರ ಪ್ರಮುಖ ಆರೋಪಿಗಳನ್ನು ಬಂದಿಸಲಾಗುತ್ತದೆ” ಎಂದರು.

“ನನ್ನ ಅಧಿಕಾರಾವಧಿಯಲ್ಲಿ ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕಲಾಗುತ್ತದೆ. ಜೊತೆಗೆ ಪತ್ತೆಯಾಗದ ಕ್ರಿಮಿನಲ್ ಪ್ರಕರಣವನ್ನು ಬೇಧಿಸಿ ನ್ಯಾಯ ದೊರಕಿಸುವ ಪ್ರಯತ್ನ ನಡೆಯುತ್ತದೆ. ಅಲ್ಲದೇ ಮಾದಕ ವಸ್ತುಗಳ ಮೇಲೆ ಹೆಚ್ಚಿನ ನಿಗಾ ಇಟ್ಟು ಗನನೀಯ ಪ್ರಮಾಣದಲ್ಲಿ ನಿಯಂತ್ರಿಸಲಾಗುತ್ತದೆ” ಎಂದರು. ಈ ಸಂದರ್ಭ ಎಸ್ಪಿ ಬಾಲಕೃಷ್ಣ ಹಾಗೂ ವಿವಿಧ ವಿಭಾಗಗಳ ಅದಿಕಾರಿಗಳು ಉಪಸ್ಥಿತರಿದ್ದರು.