ಸೂಪರ್ ಮಾರ್ಕೆಟ್ ಕಳವು ಆರೋಪಿಯಿಂದ ಮಾಹಿತಿ ಸಂಗ್ರಹ

ಆರೋಪಿ ಸಾಜಿದ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪೆÇಯಿನಾಚಿ ಪೇಟೆಯಲ್ಲಿರುವ ಅಲ್ ಮದೀನ ಹೈಪರ್ ಸೂಪರ್ ಮಾರ್ಕೆಟ್ ಬೀಗ ಮುರಿದು 2.50 ಲಕ್ಷ ರೂ ಸಹಿತ  ಹಲವು ಸಾಮಗ್ರಿಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಪೆÇಲೀಸರು ಮತ್ತೆ ವಶಕ್ಕೆ ತೆಗೆದು ಕೊಂಡ ಆರೋಪಿ ಸಾಜಿದ್ ಎಂಬಾತನನ್ನು ಆತ ವಾಸಿಸುತಿದ್ದ ಬಾಡಿಗೆ ಮನೆಗೆ ಕೊಂಡೊಯ್ದು ಅಲ್ಲಿಂದ ಅಗತ್ಯದ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಆದರೆ ಬಾಡಿಗೆ ಮನೆಯಿಂದ ಏನೂ ಪತ್ತೆಯಾಗಿಲ್ಲವೆಂಬುದಾಗಿ ಪೆÇಲೀಸರು ತಿಳಿಸಿದ್ದಾರೆ. ಈತನನ್ನು ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.