ಪತಿಯಿಂದ ಕಿರುಕುಳಕ್ಕೊಳಗಾದ ಮಹಿಳೆಗೆ ಪೆÇಲೀಸ್ ಸಹಾಯ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪತಿಯ ಕಿರುಕುಳ ಸಹಿಸಲಾಗದೆ ಪೆÇಲೀಸ್ ಸಹಾಯ ಯಾಚಸಿದ ಯುವತಿ ಹಾಗು ಮಗುವಿಗೆ ಪೆÇಲೀಸರು ಭದ್ರತೆ ನೀಡಿದ್ದಾರೆ. ಯುವತಿ ಹಾಗೂ ಮಗು ಈಗ ಪರವನಡ್ಕದಲ್ಲಿರುವ ಮಹಿಳಾ ಮಂದಿರದಲ್ಲಿದ್ದಾರೆ.

ಮವ್ವಾರು ಸಮೀಪದ ಮಠದ ಮೂಲೆ ನಿವಾಸಿ ಹರೀಶ್ ಎಂಬಾತನ ಪತ್ನಿ ಸುಲೋಚನ (32) ಮತ್ತು ಪುತ್ರ ರೋಹಿತ್ (3) ಎಂಬವರನ್ನು ಮಹಿಳಾ ಮಂದಿರಕ್ಕೆ ಸೇರಿಸಲಾಗಿದೆ. ಹರೀಶ್ ಕೂಲಿ ಕಾರ್ಮಿಕನಾಗಿದ್ದು, ಕಳೆದ ಆರು ತಿಂಗಳಿನಿಂದ ಪಾನಮತ್ತನಾಗಿ ಮನೆಗೆ ಬಂದು ಪತ್ನಿ ಹಾಗು ಮಗುವಿಗೆ ಹಲ್ಲೆಗೈಯುತ್ತಿದ್ದನೆಂದು ದೂರಲಾಗಿದೆ. ಈ ಬಗ್ಗೆ ಸುಲೋಚನ ಪೆÇಲೀಸರಿಗೆ ದೂರು ನೀಡಿದ್ದರು. ಬಳಿಕ ಹರೀಶನನ್ನು ಪೆÇಲೀಸರು ಠಾಣೆಗೆ ಕರೆಸಿ ಬುದ್ಧಿವಾದ ಹೇಳಿದ್ದರೂ ಮತ್ತೆ ಕಿರುಕುಳ ಮುಂದುವರಿದ ಹಿನ್ನೆಲೆಯಲ್ಲಿ ತಾಯಿ ಮಗುವನ್ನು ಮಹಿಳಾ ಮಂದಿರಕ್ಕೆ ಕಳುಹಿಸಲಾಗಿದೆ.