ಅನಾಥ ವೃದ್ಧಗೆ ನೆಲೆ ಒದಗಿಸಿದ ಪೊಲೀಸರು

ಕರಾವಳಿ ಅಲೆ ವರದಿ

ಉಪ್ಪಿನಂಗಡಿ : ವೃದ್ಧಾಪ್ಯದಲ್ಲಿ ಯಾರ ಆಸರೆಯೂ ಇರದೇ ಅನಾಥನಾಗಿ ಬದುಕು ನಡೆಸುತ್ತಿದ್ದ ಬಿಳಿಯೂರು ಗ್ರಾಮದ ದೇಂತಡ್ಕ ನಿವಾಸಿ ನೇಮು ಪೂಜಾರಿ ಎಂಬುವರಿಗೆ ಉಪ್ಪಿನಂಗಡಿ ಪೆÇಲೀಸರು ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಿ ಮತ್ತೊಮ್ಮೆ ಮಾನವೀಯ ಕಾರ್ಯ ಎಸಗಿ ಗಮನ ಸೆಳೆದಿದ್ದಾರೆ.

ನೇಮು ಪೂಜಾರಿಯವರು ಅತಂತ್ರ ಸ್ಥಿತಿಯಲ್ಲಿದ್ದು, ಅವರಿಂದಾಗುತ್ತಿರುವ ಸಮಸ್ಯೆ ಹಾಗೂ ಅವರಿಗೆ ಆಗುತ್ತಿರುವ ಸಂಕಷ್ಟಗಳ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿಯ ಪತ್ರಕರ್ತ ಸರ್ವೇಶಕುಮಾರ್, ನೇಮು ಪೂಜಾರಿಯವರ ಬಗ್ಗೆ ಉಪ್ಪಿನಂಗಡಿ ಪೆÇಲೀಸರ ಗಮನ ಸೆಳೆದಿದ್ದರು. ನೇಮು ಪೂಜಾರಿಯವರ ಬಗ್ಗೆ ಮಾಹಿತಿ ಸಂಗ್ರಹಿಸಿದ ಉಪ್ಪಿನಂಗಡಿ ಪೆÇಲೀಸರು ಅವರ ಬಂಧುಗಳನ್ನು ಕರೆಸಿ ಅವರಿಗೆ ಆಶ್ರಯ ಕಲ್ಪಿಸಲು ಸಾಧ್ಯವೇ ಎಂದು ವಿಚಾರಿಸಿದ್ದಾರೆ. ತನ್ನ ತಾರುಣ್ಯದಲ್ಲಿ ತಾನೇ ಸ್ವತಃ ತನ್ನ ಎಳೆಯ ಮಕ್ಕಳ ಸಹಿತ ಹೆಂಡತಿ ತೊರೆದಿದ್ದ ನೇಮು ಪೂಜಾರಿಯವರ ಬಗ್ಗೆ ಅವರ ಮಕ್ಕಳಿಗೆ ತಂದೆ ಎಂಬ ಪ್ರೀತಿಯಾಗಲಿ, ಪಿತೃ ಭಾವವಾಗಲಿ ಇಲ್ಲದಿರುವುದನ್ನು ಮನಗಂಡು ಅವರ ಮಕ್ಕಳಿಗೆ ಯಾವುದೇ ಒತ್ತಡ ಹೇರದೇ ವೃದ್ಧಾಶ್ರಮಕ್ಕೆ  ಸೇರಿಸಲು ಮುಂದಾದರು.

ಈ ಸಂಬಂಧ ಪೆರ್ನೆಯ ಬಿಲ್ಲವ ಸಂಘಟನೆಯ ಸಹಕಾರ ಪಡೆದು ಅಲ್ಲಿನ ಸಾಮಾಜಿಕ ಮುಂದಾಳು ನವೀನ ಮತ್ತಿತರರ ನೇತೃತ್ವದಲ್ಲಿ ನೇಮು ಪೂಜಾರಿಯವರಿಗೆ ಸ್ನಾನ ಮಾಡಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಕನ್ಯಾನದ ಭಾರತ್ ಸೇವಾಶ್ರಮಕ್ಕೆ ಸೇರಿಸುವ ಮೂಲಕ ನೆಲೆ ಇಲ್ಲದೆ ಅತಂತ್ರ ಸ್ಥಿತಿಗೆ ತುತ್ತಾಗಿದ್ದ ಅವರಿಗೆ ನೆಲೆಯನ್ನು ಒದಗಿಸಲಾಗಿದೆ.

LEAVE A REPLY