ಕಾಟುಕುಕ್ಕೆಯಲ್ಲಿ ಕೊಲೆಗೀಡಾದ ವ್ಯಕ್ತಿ ಕುಂದಾಪುರದವನೆಂಬ ಶಂಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾಟುಕುಕ್ಕೆ ಸಮೀಪದ ಪೆರ್ಲತ್ತಡ್ಕದಲ್ಲಿರುವ ಖಾಸಗಿ ಹಿತ್ತಲಲ್ಲಿ ಕೊಲೆಗೈಯ್ಯಲ್ಪಟ್ಟ ಅಪರಿಚಿತ ವ್ಯಕ್ತಿಯ ಬಗ್ಗೆ ಪೆÇಲೀಸರಿಗೆ ಕೆಲ ಮಾಹಿತಿ ಲಭಿಸಿದೆ.

ಈ ವ್ಯಕ್ತಿ ಕುಂದಾಪುರ ನಿವಾಸಿಯಾಗಿರಬಹುದೆಂದು ಪೆÇಲೀಸರು ಶಂಕಿಸಿದ್ದಾರೆ. ಇವರು ಕಾಟುಕುಕ್ಕೆಗೆ ಪದೇ ಪದೇ ವೆಲ್ಡಿಂಗ್ ಕೆಲಸಕ್ಕಾಗಿ ಬರುತ್ತಿದ್ದರು. ಕೆಲವು ದಿನಗಳಿಂದ ಅವರು ನಾಪತ್ತೆಯಾಗಿದ್ದರು. ಈ ಕೊಲೆ ಪ್ರಕರಣದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿ ಆಧಾರದಲ್ಲಿ ಈ ವ್ಯಕ್ತಿಯ ಕೆಲವು ಸ್ನೇಹಿತರು ಬದಿಯಡ್ಕ ಪೆÇಲೀಸ್ ಠಾಣೆಗೆ ಆಗಮಿಸಿ ಸತ್ತ ವ್ಯಕ್ತಿ ಧರಿಸಿದ್ದ ಬಟ್ಟೆಗಳನ್ನು ಪರಿಶೀಲಿಸಿದಾಗ ಅದು ಕುಂದಾಪುರದ ವ್ಯಕ್ತಿಯದ್ದೇ ಎಂದು ಬಹುತೇಕ ಗುರುತು ಹಚ್ಚಿದ್ದಾರೆ. ಈ ಬಗ್ಗೆ ಆ ವ್ಯಕ್ತಿಯ ಮನೆಯವರಿಗೆ ಮಾಹಿತಿ ನೀಡಲಾಗಿದೆ. ಅವರು ಇಲ್ಲಿಗೆ ಆಗಮಿಸಿ ಪರಿಶೀಲಿಸಿದ ಬಳಿಕವಷ್ಟೇ ಸತ್ತ ವ್ಯಕ್ತಿ ಕುಂದಾಪುರ ನಿವಾಸಿಯಾಗಿರಬಹುದೇ ಎಂಬುದನ್ನು ಖಾತರಿಪಡಿಸಲು ಸಾಧ್ಯವೆಂದು ಪೆÇಲೀಸರು ತಿಳಿಸಿದ್ದಾರೆ.

ಡಿಸೆಂಬರ್ 30ರಂದು ಪೆರ್ಲತ್ತಡ್ಕದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ  ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತ ವ್ಯಕ್ತಿ ಕಂದು ಬಣ್ಣದ ಟೀಶರ್ಟ್ ಮತ್ತು ಲುಂಗಿ ಧರಿಸಿದ್ದರು. ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅಲ್ಲಿನ ಫೆÇೀರೆನ್ಸಿಕ್ ವಿಭಾಗದ ಪೆÇಲೀಸ್ ಸರ್ಜನ್ ಡಾ ಗೋಪಾಲಕೃಷ್ಣ ಪಿಳ್ಳೆ ನೇತೃತ್ವದ ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಯಾವುದೋ ಆಯುಧ ಬಳಸಿ ಹಿಂದಿನಿಂದ ತಲೆಗೆ ಹೊಡೆದು ಆ ವ್ಯಕ್ತಿಯನ್ನು ಕೊಲೆಗೈಯ್ಯಲಾಗಿತ್ತೆಂದು ಸ್ಪಷ್ಟಗೊಂಡಿತ್ತು.

ಮೃತದೇಹ ಪತ್ತೆಯಾದ ಸ್ಥಳಕ್ಕೆ ಪೆÇಲೀಸ್ ಸರ್ಜನ್ ಡಾ ಗೋಪಾಲಕೃಷ್ಣ ಪಿಳ್ಳೆ ಭೇಟಿ ನೀಡಿ ಅಗತ್ಯದ ಮಾಹಿತಿಯನ್ನು ಸಂಗ್ರಹಿಸಿದ್ದರು. ಈ ವ್ಯಕ್ತಿಯನ್ನು ಬೇರೆ ಎಲ್ಲೋ ಕೊಲೆಗೈದು ಮೃತದೇಹವನ್ನು ಪೆರ್ಲತ್ತಡ್ಕಕ್ಕೆ ತಂದು ಅಲ್ಲಿ ಬೀಸಾಡಿದ್ದಾರೆಂಬ ಸಂಶಯ ವ್ಯಕ್ತಪಡಿಸಲಾಗಿತ್ತು.

 

LEAVE A REPLY