ಹೊಣೆ ಮರೆತ ಪೊಲೀಸರು

ಸಾಂದರ್ಭಿಕ ಚಿತ್ರ

ರಸ್ತೆಯಲ್ಲಿ ಅಪಘಾತವಾಗಿ ರಕ್ತ ಮಡುವಿನಲ್ಲಿ ಇರುವ ಗಾಯಾಳುಗಳನ್ನು ಮೊದಲು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿ ಜೀವ ಉಳಿಸಿ ಎಂದು ಪೊಲೀಸ್ ಇಲಾಖೆ ಪ್ರಕಟಿಸಿದೆ. ಆದರೆ ಮಂಗಳೂರಿನಲ್ಲಿ ಅಹಮ್ಮದ್ ಎನ್ನುವವರ ಮೇಲೆ ರೌಡಿಗಳು ಮಾರಣಾಂತಿಕವಾಗಿ ದಾಳಿ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು ವಿಚಾರಿಸದೆ ಆಟೋದಲ್ಲಿ ಆಸ್ಪತ್ರೆಗೆ ತೆರಳಲು ಸೂಚಿಸಿದ್ದಾರೆ. ಸಾವು ಬದುಕಿನ ಮಧ್ಯೆ ಇರುವ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವಷ್ಟು ಮಾನವೀಯತೆ ನಮ್ಮ ಆರಕ್ಷಕರಿಗೆ ಇಲ್ಲವೇ  ಪೊಲೀಸರ ಈ ವರ್ತನೆ ಖಂಡನೀಯ. ಇನ್ನೂ ಮುಂದಾದರೂ ಪೊಲೀಸರ ವರ್ತನೆ ಬದಲಾಗಲಿ

  • ಟಿ ಸುರಾಜ್ ಕೋಟ್ಯಾನ್  ಕೊಪ್ಪಲಂಗಡಿ