ಬಾಲಕಿ ಸಾಮೂಹಿಕ ಅತ್ಯಾಚಾರ ನಡೆದ 4 ತಿಂಗಳ ನಂತರ ಕೇಸು ದಾಖಲಿಸಿದ ಪೊಲೀಸರು

ಸಾಂದರ್ಭಿಕ ಚಿತ್ರ

ಜೈಪುರ : ಹದಿನೆಂಟು ವರ್ಷದ ದಲಿತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಗೈದ ನಾಲ್ವರ ವಿರುದ್ಧ ಪೊಲೀಸರು 4 ತಿಂಗಳ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದು, ಅಲ್ವಾರ ಜಿಲ್ಲೆಯ ರಾಮಗಾರ್ಗ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

ನಾಲ್ಕು ತಿಂಗಳವರೆಗೆ ಸುಮ್ಮನಿದ್ದ ಬಾಲಕಿ, ನಡೆದ ಘಟನೆಯನ್ನು ಪಾಲಕರಿಗೆ ತಿಳಿಸಿದ್ದು, ಗುರುವಾರ ಪೊಲೀಸ್ ದೂರು ನೀಡಲಾಗಿದೆ. ಆರೋಪಿಗಳಲ್ಲಿ ಖೇರಿ ಸರಪಂಚ ಸಹಿತ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಲಕಿ ಹೊಲಿಗೆ ತರಬೇತಿ ಕ್ಲಾಸಿಗೆ ತೆರಳಲು ಬಹದೂರ್ಪುರ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದಿದ್ದ ವೇಳೆ ಆರೋಪಿಗಳಾದ ಹೇಮಂತ್ ಮತ್ತು ಆತನ ಇನ್ನೊಬ್ಬ ಗೆಳೆಯ ಬೈಕಿನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿದ್ದರು. ಮುಂದೆ ಸಾಗುತ್ತಲೇ ಇಬ್ಬರನ್ನು ಕೂಡಿಕೊಂಡ ಖೇರಿ ಸರಪಂಚ ಧರಮವೀರ್ ಸೈನಿ ಮತ್ತು ರಾಜು ಚೌಧರಿ ಬಾಲಕಿಯ ಬಾಯಿಗೆ ಬಟ್ಟೆ ತುರುಕಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಘಟನೆಯ ಸಂಪೂರ್ಣ ವೀಡಿಯೋಚಿತ್ರಣ ನಡೆಸಿದ್ದರು.

ಗರ್ಭಿಣಿಯಾಗಿದ್ದ ಬಾಲಕಿಯನ್ನು ಮೂರ್ಛೆ ಹೋಗುವಂತೆ ಮಾಡಿದ್ದ ಹೇಮಂತ್ ಡಿ 28ರಂದು ಅಲ್ವಾರದ ಆಸ್ಪತ್ರೆಗೆ ಸೇರಿಸಿದ್ದ. ಮನೆಯವರಲ್ಲಿ ಈ ವಿಷಯ ತಿಳಿಸಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು. ಆರೋಪಿಗಳು ಸ್ಥಳೀಯವಾಗಿ ಪ್ರಭಾವಿ ವ್ಯಕ್ತಿಗಳಾಗಿದ್ದಾರೆ.