ಪರಿವಾರದ ಸಂಘಟನೆಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ನಗರ ಪೆÇಲೀಸ್ ವ್ಯವಸ್ಥೆ

ಸಾಂದರ್ಭಿಕ ಚಿತ್ರ

 

ಅಪರಾಧ ಹೆಚ್ಚಳದ ಹಿಂದೆ ಪೆÇಲೀಸರ ವೈಫಲ್ಯ

ವಿಶೇಷ ವರದಿ

ಮಂಗಳೂರು : ಕರಾವಳಿಯ ಪ್ರಮುಖ ನಗರ ಮಂಗಳೂರಿನಲ್ಲಿ ಮಾದಕ ದ್ರವ್ಯ ಜಾಲ, ಗೂಂಡಾಪಡೆ, ವಸೂಲಿಬಾಜಿ, ಅನೈತಿಕ ಪೊಲೀಸಗಿರಿ, ಹಲ್ಲೆ, ಕೊಲೆ ಕೃತ್ಯಗಳು ಹೆಚ್ಚುತ್ತಿರುವುದಕ್ಕೆ ನಗರ ಪೆÇಲೀಸ್ ವ್ಯವಸ್ಥೆಯ ವೈಫಲ್ಯ ಕಾರಣ ಎನ್ನುವ ಭಾವನೆ ನಾಗರಿಕರಲ್ಲಿ ಹೆಚ್ಚುತ್ತಿದೆ.

ರಾಜಕೀಯ ಹಸ್ತಕ್ಷೇಪದಿಂದಲೇ ಗಾಂಜಾ ಮತ್ತಿತರ ಮಾದಕ ದ್ರವ್ಯ ಮಾರಾಟ ವಿಸ್ತರಣೆಯಾಗಿದ್ದರೆ, ಪೆÇಲೀಸರ ಹಳೇ ಕಾಲದ ಚಿಂತನೆಗಳು, ಅವರ ಜಡ್ಡುಬಿದ್ದ ಮಾನಸಿಕ ಪರಿಸ್ಥಿತಿ, ಸಂಘ ಪರಿವಾರದ ಅಜೆಂಡಾಗಳನ್ನು ಸಾಕಾರ ಇಚ್ಛೆಯ ಪೆÇಲೀಸರಿಂದಾಗಿ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ.

ರೌಡಿ ಹಿನ್ನೆಲೆಯ ವ್ಯಕ್ತಿಯಾಗಿದ್ದರೂ ಕೂಡ ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ವಿಶ್ರಾಂತಿ ಪಡೆಯುತ್ತಿದ್ದಾಗ ಕೊಲೆ ಮಾಡಿರುವುದು ವ್ಯವಸ್ಥೆಯು ಎಷ್ಟರ ಮಟ್ಟಿಗೆ ಶಿಥಿಲವಾಗಿದೆ ಮತ್ತು ರಕ್ಷಣೆ ನೀಡಬೇಕಾದ ಪೆÇಲೀಸ್ ವ್ಯವಸ್ಥೆ ನಿಸ್ಸಾಯಕವಾಗಿರುವುದಕ್ಕೆ ಉದಾಹರಣೆಯಾಗಿದೆ.

ನಗರ ಪೆÇಲೀಸರ ವ್ಯಾಪ್ತಿಯಲ್ಲಿ ಸಂಭವಿಸುತ್ತಿರುವ ಸರಣಿ ಅನೈತಿಕ ಪೊಲೀಸಗಿರಿ ಮತ್ತು ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಸಂಘ ಪರಿವಾರದ ಗೂಂಡಾ ಸಂಘಟನೆಗಳ ದಾಳಿಗಳ ಹೆಚ್ಚಳ ಆಗುತ್ತಿರುವುದರ ಹಿಂದೆ ಇತ್ತೀಚಿಗಿನ ತಿಂಗಳಲ್ಲಿ ಪೆÇಲೀಸರು ಅನುಸಿಸುತ್ತಿರುವ ಸಡಿಲ ನೀತಿಯೇ ಕಾರಣವಾಗಿದೆ ಎಂಬುದನ್ನು ರಾಜ್ಯ ಸರಕಾರ ಗಮನಿಸಬೇಕಾಗಿದೆ.

ಜಿಲ್ಲೆಯ ಆಡಳಿತ ನಿರ್ವಹಣೆಯ ಹೊಣೆಗಾರಿಕೆ ಹೊತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತನ್ನ ಅಧಿಕಾರದ ನೆಲೆಯಲ್ಲಿ ಹಿರಿಯ ಪೆÇಲೀಸ್ ಅಧಿಕಾರಗಳೊಂದಿಗೆ ಚರ್ಚೆ ನಡೆಸಿರುವುದನ್ನು ಪರಿವಾರದ ಮಂದಿ ಮಹಾ ಅಪರಾಧ ಎಂಬಂತೆ ಬಿಂಬಿಸುತ್ತಾರೆ. ಮಾತ್ರವಲ್ಲದೆ, ಈ ಬಗ್ಗೆ ಸೋಶಿಯಲ್ ಮಿಡಿಯಾಗಳಲ್ಲಿ ಟೀಕೆ ಟಿಪ್ಪಣಿಗಳನ್ನು ಹರಿಯಬಿಡಲಾಗುತ್ತಿದೆ. ವಾಸ್ತವದಲ್ಲಿ ರೌಡಿಪಟ್ಟಿಯಲ್ಲಿ ಇರಬೇಕಾಗಿದ್ದ ಮರಳು ಇತ್ಯಾದಿ ಅಕ್ರಮ ವ್ಯವಹಾರಗಳಲ್ಲಿ ಇರುವ ಪರಿವಾರದ ತುಂಡು ಸಂಘಟನೆಗಳ ಮುಖಂಡರೇ ದೂರವಾಣಿ ಮೂಲಕ ಹಿರಿಯ ಪೆÇಲೀಸ್ ಅಧಿಕಾರಿಗಳಿಗೆ ಕಾನೂನುಬಾಹಿರ ಸೂಚನೆ ನಿದೇರ್ಶನ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಸಂಘಟಿತ ಅಪರಾಧ ಲೋಕದಲ್ಲಿ ಇಂತಹ ಮಂದಿ ಸ್ಥಳೀಯವಾಗಿ ಪೆÇಲೀಸರಿಗೆ ಅತ್ಯಂತ ಆಪ್ತರು ಮಾತ್ರಲ್ಲದೆ, ಪೆÇಲೀಸರನ್ನು ಚೆನ್ನಾಗಿ ನೋಡಿಕೊಳ್ಳುವ ಪರಿಣಾಮ ಪೆÇಲೀಸ್ ವ್ಯವಸ್ಥೆ ಇದೀಗ ಪರಿವಾರದ ಸಂಘಟನೆಗಳ ನಿಯಂತ್ರಣದಲ್ಲಿ ಇರುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಸ್ತವ ಅರಿತುಕೊಳ್ಳಬೇಕಾಗಿದೆ.

ಜಾನುವಾರುಗಳ ಸಾಗಾಟ, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸ್ನೇಹಿತರು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಾಗ ಅನ್ಯಕೋಮಿನ ಹೆಣ್ಣು ಗಂಡು ಒಟ್ಟಾಗಿ ಹೋಗಬಾರದು ಎಂದು ಹಲ್ಲೆ ನಡೆಸುವ ಕಮ್ಯುನಲ್ ಗೂಂಡಾಗಳೊಂದಿಗೆ ಪೆÇಲೀಸರು ಬಹಿರಂಗವಾಗಿ ಕಾಣಿಸಿಕೊಂಡಿರುವುದು ಹಲವು ಪ್ರಕರಣಗಳಲ್ಲಿ ಸ್ಪಷ್ಟವಾಗಿದೆ.

ಮಾತ್ರವಲ್ಲದೆ, ಇಂತಹ ಪ್ರಕರಣಗಳನ್ನು ನಿಭಾಯಿಸುವಾಗ ಪೆÇಲೀಸರು ಕನಿಷ್ಟ ಸೌಜನ್ಯ ತೋರಿಸದೆ ತಾವೇ ಕಾನೂನು ಉಲ್ಲಂಘಿಸುವುದು, ಮಾನವ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದು ಸೋಶಿಯಲ್ ಮಿಡಿಯಾಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಸ್ಪಷ್ಟವಾಗಿದೆ.

ಧರ್ಮವೊಂದರ ಗುತ್ತಿಗೆ ಹಿಡಿದು ಮಾತನಾಡುತ್ತಿರುವ ಪರಿವಾರದ ಸಂಘಟನೆಗಳ ಮಂದಿ ತಮ್ಮದೇ ಧರ್ಮದ ಯುವತಿಯರ ವಿಡಿಯೋಗಳನ್ನು ಸೋಶಿಯಲ್ ಮಿಡಿಯಾಗಳಲ್ಲಿ ಹರಿಯಬಿಟ್ಟು ಅವರ ಮಾನ ಹಾನಿ ಮತ್ತು ಅವಮಾನ ಮಾಡುವ ಅಪರಾಧ ಮಾಡುತ್ತಿದ್ದರೂ ಮಂಗಳೂರು ನಗರ ಪೆÇಲೀಸರು ಮಾತ್ರ ಈ ನಿಟ್ಟಿನಲ್ಲಿ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಿದ್ಧರಿಲ್ಲ.

ಇಂತಹ ಪ್ರಕರಣಗಳು ನಡೆದಾಗ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲಾ ಪೆÇಲೀಸರು ದಿಟ್ಟತನದಿಂದ ಸಮಾಜ ದ್ರೋಹಿ ದುಷ್ಕರ್ಮಿಗಳನ್ನು ಬಂಧಿಸಿ ಜೈಲಿಗೆ ಹಾಕುತ್ತಿದ್ದರೆ ಮಂಗಳೂರು ಪೊಲೀಸರು ಮಾತ್ರ ಸೈಬರ್ ಅಪರಾಧದ ಬಗ್ಗೆ ಅರಿವೇ ಇಲ್ಲಂದತೆ ವರ್ತಿಸುತ್ತಿರುವುದು ಸಂಶಯಾಸ್ಪದವಾಗಿದೆ.

ಚಂದ್ರಶೇಖರ್ ಅವರಂತಹ ಕಾನೂನು¥ರÀ, ಮಾನವೀಯ ಕಳಕಳಿಯ ಟಫ್ ಅಧಿಕಾರಿಯ ವರ್ಗಾವಣೆಯಾದ ಅನಂತರ ನಗರದಲ್ಲಿ ಪೆÇಲೀಸ್ ವ್ಯವಸ್ಥೆ ಸರಕಾರದ ನಿಯಂತ್ರಣದಲ್ಲಿರದೆ ಇನ್ಯಾರದೊ ಸಪರ್ದಿಯಲ್ಲಿ ಇದ್ದಂತೆ ಕಾಣಿಸುತ್ತಿದೆ.

 

 

LEAVE A REPLY