ತಾಮ್ರದ ತಂತಿ ಕಳವು

ಸಾಂದರ್ಭಿಕ ಚಿತ್ರ

ಕಾಸರಗೋಡು : ಸೀತಾಂಗೋಳಿಯ ಕೆಮಿಕಲ್ ಇಂಡಸ್ಟ್ರೀಸ್ ಪಾರ್ಕಿನಿಂದ ಎರಡು ಲಕ್ಷ ರೂ ಮೌಲ್ಯದ 600 ಕಿಲೋ ತಾಮ್ರದ ತಂತಿ ಕಳವಿಗೀಡಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮ್ಯಾನೇಜರ್ ಬೇಬಿ ಜೇಕಬ್ ನೀಡಿದ ದೂರಿನಂತೆ ಕುಂಬಳೆ ಪೆÇಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.