ಪುರಿ ಮಂದಿರದಲ್ಲಿ ದೇವರ ಮೂರ್ತಿ ಸ್ಪರ್ಶಿಸಿದ ಪೊಲೀಸ್ ಅಮಾನತು

ಪುರಿ : ಪುರಿಯ ಜಗನ್ನಾಥ ದೇವಾಲಯದಲ್ಲಿ ಕಳೆದ ವಾರ ನಡೆದ ಜಾತ್ರಾ ಮಹೋತ್ಸವದ ವೇಳೆ ಅಲ್ಲಿನ ಮೂರು ದೇವರ ಮೂರ್ತಿಗಳಲ್ಲಿ ದೇವಿ ಸುಭದ್ರಾ ಮೂರ್ತಿ ಸ್ಪರ್ಶಿಸಿದ ಆರೋಪದಲ್ಲಿ ಒಡಿಸ್ಸಾ ಪೊಲೀಸ್ ತನ್ನ ಪೊಲೀಸ್ ನಿರೀಕ್ಷಕರೊಬ್ಬರನ್ನು ಅಮಾನತುಗೊಳಿಸಿದೆ.

ಪೊಲೀಸ್ ನಿರೀಕ್ಷಕ ಅಮೂಲ್ಯ ಕುಮಾರ್ ಧರ್ ಒಡಿಸ್ಸಾ ಹೈಕೋರ್ಟ್ ಆದೇಶ ಉಲ್ಲಂಘಿಸಿ ದೇವಿ ಮೂರ್ತಿ ಸ್ಪರ್ಶಿಸಿದ್ದಾರೆಂಬ ಆರೋಪದಲ್ಲಿ ಡಿಜಿಪಿ ಕೆ ಬಿ ಸಿಂಗ್ ಅಮಾನತು ಆದೇಶ ಹೊರಡಿಸಿದ್ದಾರೆ.

ದೇವಾಲಯಕ್ಕೆ ಸಂಬಂಧಪಡದವರು ಭಕ್ತರು ರಥಕ್ಕೆ ಹತ್ತುವುದು ಅಥವಾ ದೇವರ ಮೂರ್ತಿ ಸ್ಪರ್ಶಿಸುವುದಕ್ಕೆ ಕೋರ್ಟ್ ನಿಷೇಧ ಹೇರಿದೆ. ಸಾಕಷ್ಟು ಅಂತರ ಕಾಪಾಡಿಕೊಂಡು ಭಕ್ತರಿಗೆ ದೇವರ ದರ್ಶನ ನೀಡಬೇಕೆಂದು ನಿರ್ದೇಶಿಸಲಾಗಿದೆ.