ಬಸ್ ಗುದ್ದಿ ಪೊಲೀಸ್ ಆಸ್ಪತ್ರೆಗೆ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಉಡುಪಿ : ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಉಡುಪಿ ನಗರದ ಅಪರಾಧ ಪತ್ತೆದಳದ ಪೊಲೀಸ್ ಗಂಭೀರ ಗಾಯಗೊಂಡ ಘಟನೆ ನಗರದ ಹೊರವಲಯದ ದೊಡ್ಡಣಗುಡ್ಡೆ ಪೊಲೀಸ್ ವಸತಿಗೃಹದ ಬಳಿ ಸಂಭವಿಸಿದೆ.

ಪೊಲೀಸ್ ವಸತಿಗೃಹ ನಿವಾಸಿ, ಪೊಲೀಸ್ ಸಿಬ್ಬಂದಿ ಕೇಶವ ಗೌಡ (55) ಗಂಭೀರ ಗಾಯಗೊಂಡವರು. ಇವರು ಬೈಕಲ್ಲಿ ಮನೆ ಕಡೆಗೆ ಬರುತ್ತಿದ್ದ ವೇಳೆ ಪೆರಂಪಳ್ಳಿ ಕಡೆಯಿಂದ ಗುಂಡಿಬೈಲು ಕಡೆಗೆ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತಕ್ಕೆ ಕಾರಣನಾದ ಆರೋಪಿ ಬಸ್ ಚಾಲಕ ವಿರುದ್ಧ ನಗರ ಸಂಚಾರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.