ಟ್ಯಾಂಕರಿಗೆ ಕಾರು ಡಿಕ್ಕಿ : ಪೋಲಿಸ್ ದುರ್ಮರಣ

ಮೃತ ಪದ್ಮನಾಭ ಮತ್ತು ಅಪಘಾತಕ್ಕೀಡಾದ ವಾಹನಗಳು

ಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಟ್ಯಾಂಕರ್ ಲಾರಿಗೆ ಕಾರೊಂದು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಪೋಲಿಸ್ ಅಧಿಕಾರಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಪೆರಿಯಾ ಸಮೀಪದ ಕುಣಿಯಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಕಾಸರಗೋಡು ಪೋಲಿಸ್ ಸಶಶ್ತ್ರ ಮೀಸಲು ಶಿಬಿರದ ಗ್ರೇಡ್ ಎ ಎಸ್ ಐ ನೀಲೇಶ್ವರ ಕರಿದಳಂ ಅಂಡಾಲ್ ನಿವಾಸಿ ಪದ್ಮನಾಭ (45) ಮೃತ ದುರ್ದೈವಿ.

ಪದ್ಮನಾಭ ಮನೆಯಿಂದ ಕಾರಿನಲ್ಲಿ ಕಾಸರಗೋಡಿನತ್ತ ಬರುತ್ತಿದ್ದ ವೇಳೆ ಕುಣಿಯಾದ ರಸ್ತೆ ಬದಿಯಲ್ಲಿ ಟ್ಯಾಂಕರ್ ಲಾರಿ ನಿಲ್ಲಿಸಲಾಗಿತ್ತು. ಇದರ ಹಿಂಬದಿಗೆ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಅಪಘಾತದಿಂದ ಗಾಯಗೊಂಡ ಪದ್ಮನಾಭರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಿಲ್ಲ.