ಪೊಲೀಸ್ ಪೇದೆಗೆ ಪಿಕ್ ಅಪ್ ಚಾಲಕ, ತಂಡ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಟೇಶ್ವರದ ಕಿನಾರಾ ವೈ ಕ್ರಾಸ್ ಬಳಿ ಕರ್ತವ್ಯನಿರತರಾಗಿದ್ದ ಸಂಚಾರಿ ಪೊಲೀಸ್ ಒಬ್ಬರಿಗೆ ಪಿಕ್ ಅಪ್  ವಾಹನ ಚಾಲಕ ಹಾಗೂ ಆತನ ಜೊತೆಗಿದ್ದ ನಾಲ್ವರ ತಂಡ  ಹಲ್ಲೆ ನಡೆಸಿದರೆನ್ನಲಾಗಿದೆ.

ಮಂಗಳವಾರ ಸಂಜೆ ಕೋಟೇಶ್ವರ ಕೊಡಿ ಹಬ್ಬದ ಸಂದರ್ಭ ಕೆಲಸ ನಿರ್ವಹಿಸುತ್ತಿದ್ದ ಅಜರುದ್ಧೀನ್ ಎಂಬಾತನೇ ಹಲ್ಲೆಗೊಳಗಾದಾತ. ಪಿಕ್ ಅಪ್ ಚಾಲಕ ಇಕ್ಬಾಲ್ ಹಾಗೂ ತಂಡ ಹಲ್ಲೆ ನಡೆಸಿದ ಅರೋಪಿಗಳು.

ಮಂಗಳವಾರ ಸಂಜೆ ಸಂಚಾರ ನಿಮತ್ರಣ ಮಾಡುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಬರುತ್ತಿದ್ದ ಇಕ್ಬಾಲ್ ಎಂಬಾತ ಚಲಾಯಿಸುತ್ತಿದ್ದ ಪಿಕ್ ಅಪ್ ವಾಹನವೊಂದು ಅತೀ ವೇಗದಲ್ಲಿ ಬಂದು ಒಮ್ಮೆಲೇ ಬ್ರೇಕ್ ಹಾಕಿದ್ದು, ಈ ಸಂದರ್ಭ ಎದುರಿಗಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಸ್ಥಳದಲ್ಲಿದ್ದ ಅಜರುದ್ಧೀನ್ ಎಂಬ ಪೊಲೀಸ್ ಚಾಲಕ ಇಕ್ಬಾಲಗೆ ಗದರಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಇಕ್ಬಾಲ್ ಮತ್ತು ತಂಡ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ.