ವಿವಾದಿತ ರಾಯಭಾರಿ ದೇವಯಾನಿ ಖೋಬ್ರಗಡೆಯ `ದಿ ವೈಟ್ ಸಾರಿ’

ನವದೆಹಲಿ : 2013ರಲ್ಲಿ ಅಮೆರಿಕದಲ್ಲಿ ವೀಸಾ ವಂಚನೆ ಆರೋಪದೊಂದಿಗೆ ವಿವಾದ ಸೃಷ್ಟಿಸಿದ್ದ ಭಾರತೀಯ ರಾಯಭಾರಿ ದೇವಯಾನಿ ಖೋಬ್ರಗಡೆ `ದಿ ವೈಟ್ ಸಾರಿ'(ಬಿಳಿ ಸೀರೆ) ಚೊಚ್ಚಲ ಕಾದಂಬರಿ ಪ್ರಕಟವಾಗಿದೆ.

ಈ ಪುಸ್ತಕವು ದಲಿತ ಹುಡುಗಿ ರತ್ನಾಳನ್ನು ಕೇಂದ್ರೀಕರಿಸಿದ್ದು, ಆಕೆಯ ಪ್ರೀತಿ ಜಾತಿ ಎಂಬ ಸಂಕೋಲೆಯೊಳಗೆ ಸಿಲುಕುತ್ತದೆ. ಜೊತೆಗೆ ದಲಿತ ಮಹಿಳೆಯ ಕೋಪ, ಉದ್ವೇಗ ಮತ್ತು ಸಂಕಷ್ಟ ಚಿತ್ರಣವಿದ್ದು, ಕೊನೆಗೆ ಆಕೆ ಎಲ್ಲ ಆಚರಣೆಗಳಿಂದ ಹೊರಗೆ ಬರಲು ಪ್ರಯತ್ನಿಸುತ್ತಾಳೆ.

ಖೋಬ್ರಗಡೆ 2013ರಲ್ಲಿ ನ್ಯೂಯಾರ್ಕಿನಲ್ಲಿ ಉಪ ರಾಯಭಾರಿ ಜನರಲ್ ಆಗಿದ್ದರು. ಇವರ ವಿರುದ್ಧ ಅಮೆರಿಕ ಅಧಿಕಾರಿಗಳು ವೀಸಾ ವಂಚನೆ ಹಾಗೂ ವೀಸಾ ಅರ್ಜಿಗಾಗಿ ನಕಲಿ ದಾಖಲೆ ನೀಡಿರುವ ಆರೋಪ ಹೊರಿಸಿದ್ದರು. ಈಕೆ ತನ್ನ ಮನೆಗೆಲಸದಾಕೆ, ಭಾರತೀಯ ಮಹಿಳೆಗೆ ಕನಿಷ್ಠ ಕಾನೂನು ವೇತನಕ್ಕಿಂತ ಕಡಿಮೆ ವೇತನ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈಕೆ ತನ್ನ ಪುತ್ರಿಯನ್ನು ಶಾಲೆಗೆ ಬಿಟ್ಟು ಬಂದ ಬಳಿಕ, ದೇಹದಲ್ಲಿನ ಕುರವೊಂದರ ಪರೀಕ್ಷೆಗೆಂದು ಹೋಗಿದ್ದಾಗ ಬಂಧಿಸಲ್ಪಟ್ಟಿದ್ದರು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಭಾರತ ಸರ್ಕಾರದ ಮಧ್ಯೆ ತೀವ್ರ ತಿಕ್ಕಾಟ ನಡೆದಿತ್ತು.

2014 ಡಿಸೆಂಬರಿನಲ್ಲಿ ವಿದೇಶಾಂಗ ವ್ಯವಹಾರ ಸಚಿವಾಲಯವು ಮಾಧ್ಯಮಗಳಿಗೆ ಅನಧಿಕೃತ ಸಂದರ್ಶನ ನೀಡುವುದಕ್ಕೆ ತಡೆ ಹೇರಿತ್ತು. ಪ್ರಸಕ್ತ ದೇವಯಾನಿ ವಿದೇಶಾಂಗ ಸಚಿವಾಲಯದ ರಾಜ್ಯಗಳ ವಿಭಾಗದ ನಿರ್ದೇಶಕರಾಗಿದ್ದಾರೆ.