ಕಲುಷಿತ ನೀರು ಕುಡಿದು 15ಕ್ಕೂ ಹೆಚ್ಚು ಮಂದಿ ಅಸ್ವಸ್ಥ : ಮಹಿಳೆ ಸಾವು

ನಮ್ಮ ಪ್ರತಿನಿಧಿ ವರದಿ

ಶಿರಸಿ : ಹೂವಿನಹಡಗಲಿಯಲ್ಲಿ ಸೋಮವಾರ ನಡೆದ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಲುಷಿತ ನೀರು ಕುಡಿದು 15ಕ್ಕೂ ಹೆಚ್ಚು ಮಂದಿ ಭಕ್ತರು ಅಸ್ವಸ್ಥರಾಗಿದ್ದು, ಇದರಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದು, ಅಸ್ವಸ್ಥರಾದವರು ನಗರದ ಟಿಎಸ್ಸೆಸ್ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದಾರೆ.

ರಾಜ್ಯಮಟ್ಟದ ಮೈಲಾರ ಲಿಂಗೇಶ್ವರ ಜಾತ್ರೆಗೆ ಕಳೆದ 3 ದಿನಗಳ ಹಿಂದೆ ತೆರಳಿದ ಹಲವು ಭಕ್ತರು ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೊಂಕಣ ಗ್ರಾಮದ 15ಕ್ಕೂ ಹೆಚ್ಚು ಮಂದಿಗೆ ವಾಂತಿ-ಬೇಧಿ ಶುರುವಾಗಿ ತಕ್ಷಣ ಶಿರಸಿ ಆಸ್ಪತ್ರೆ ಸೇರಿದ್ದಾರೆ. ಅದೇ ರೀತಿ ಊಟ ಕಟ್ಟಿಕೊಂಡು ಹೋದ ಮಂದಿ ಅಲ್ಲಿನ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದಾರೆ. ಜಾತ್ರೆಯಿಂದ ಬಂದ ಒಂದೇ ದಿನದಲ್ಲಿ ವಾಂತಿ-ಬೇಧಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ.

ಜಾತ್ರೆಗೆ ಹೋಗಿದ್ದ 15ಕ್ಕೂ ಹೆಚ್ಚು ಮಂದಿಯಲ್ಲಿ ಓರ್ವ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೇ ಹಾನಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ವಾಂತಿ-ಬೇಧಿ ಕಾಣಿಸಿಕೊಂಡ ಗಂಟೆಯೊಳಗೆ ಎಲ್ಲರನ್ನು ಹಾನಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಅಲ್ಲಿ ದಾಖಲಾಗಿದ್ದ 15 ಮಂದಿಯಲ್ಲಿ ವೃದ್ಧೆಯೊಬ್ಬಳು ಸಾವನ್ನಪ್ಪಿದ್ದಾಳೆ. ಹೆಚ್ಚಿನವರು ಶಿರಸಿ ಗಡಿ ಭಾಗದ ಜನರಾಗಿದ್ದು, ಇದು ಆತಂಕಕಾರಿ ಸಂಗತಿಯಾಗಿದೆ.

 

LEAVE A REPLY