ಕಾರ್ಮಿಕ ಮೃತ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ವಾಹನ ಅಪಘಾತ ಸಂಭವಿಸಿದ್ದು ಕಟ್ಟಡ ನಿರ್ಮಾಣ ಕಾರ್ಮಿಕ ಮೃತಪಟ್ಟು ದಂಪತಿ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕಲ್ಲಂಗೈ ಬಳ್ಳೂರು ನಿವಾಸಿ ಸುರೇಶ್ ಗಟ್ಟಿ (41) ಮೃತ ದುರ್ದೈವಿಯಾಗಿದ್ದಾರೆ. ನಿರ್ಮಾಣ ಕಾರ್ಮಿಕನಾದ ಇವರು ಕೆಲಸ ಸ್ಥಳದಲ್ಲಿ ಸಾಮಗ್ರಿ ಇಳಿಸಿ ಬೈಕಿನಲ್ಲಿ ಮರಳಿ ವಾಸಸ್ಥಳಕ್ಕೆ ತೆರಳುತ್ತಿದ್ದಾಗ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಬಳಿ ಅಪಘಾತ ಸಂಭವಿಸಿದೆ.
ಸುರೇಶ್ ಗಟ್ಟಿ ಸಂಚರಿಸಿದ ಬೈಕ್ ಹಾಗೂ ಮಾಯಿಪ್ಪಾಡಿ ತೈವಳಪ್ಪು ನಿವಾಸಿ ಅಮ್ಮು ಪೂಜಾರಿ, ಪತ್ನಿ ಸುಮಲತ ಸಂಚರಿಸುತ್ತಿದ್ದ ಸ್ಕೂಟರ್ ಪರಸ್ಪರ ಡಿಕ್ಕಿ ಹೊಡೆದಿದೆ. ಸುರೇಶರನ್ನು ಮಂಗಳೂರಿನ ಆಸ್ಪತ್ರೆಗೂ, ಅಮ್ಮು ಪೂಜಾರಿ ಹಾಗೂ ಸುಮಲತರನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಸುರೇಶ್ ಉಪ್ಪಳಕ್ಕೆ ತಲುಪುವಷ್ಟರಲ್ಲಿ ಮೃತಪಟ್ಟರು.