ಎದೆಗೆ ಗುಂಡು ಹಾರಿಸಿಕೊಂಡು ಕಾನಸ್ಟೇಬಲ್ ಆತ್ಮಹತ್ಯೆ

ಶಿಗ್ಗಾಂವ್ : ಹಾವೇರಿ ಜಿಲ್ಲೆಯ ಗಂಗಿಬಾವಿಯಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಹೆಡ್ ಕಾನಸ್ಟೇಬಲ್ ಒಬ್ಬರು ಎದೆಗೆ  ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತರನ್ನು ಮಹೇಶ್ವರಪ್ಪ (51) ಎಂದು ಗುರುತಿಸಲಾಗಿದೆ.  10ನೇ ಬೆಟಾಲಿಯನ್ನಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೆಗಂಗೂರಿನವರಾಗಿದ್ದರು. ಮೀಸಲು ಪೊಲೀಸ್ ಪಡೆಯ ಶಸ್ತ್ರಾಸ್ತ್ರ ಘಟಕದಲ್ಲಿ ಕರ್ತವ್ಯದಲ್ಲಿರುವಾಗಲೇ ಮಂಗಳವಾರ ರಾತ್ರಿ ಮಹೇಶ್ವರಪ್ಪ ಗುಂಡು ಹಾರಿಸಿಕೊಂಡಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ದಾರಿ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಮಹೇಶ್ವರಪ್ಪ ಅವರ ಹಿರಿಯ ಪುತ್ರನ ವಿವಾಹದ ವಿಚಾರದಲ್ಲಿ ಅವರ ಕುಟುಂಬದಲ್ಲಿ  ವಿವಾದವೇರ್ಪಟ್ಟಿತ್ತೆನ್ನಲಾಗಿದ್ದು ಇದೇ ಕಾರಣದಿಂದ ಅವರು ಬೇಸತ್ತು ಆತ್ಮಹತ್ಯೆಗೈಯ್ಯುವ ನಿರ್ಧಾರಕ್ಕೆ ಬಂದಿರಬಹುದೆಂದು ಶಂಕಿಸಲಾಗಿದೆ.