ಪುತ್ತೂರು ಕಾಂಗ್ರೆಸ್ ಶಾಸಕಿ ಬಗ್ಗೆ ಕಾಂಗ್ರೆಸ್ಸಿಗರಿಗೇ ಅನುಮಾನವಿದೆ

ಜೆಡಿಎಸ್ ಆರೋಪ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : “ದೇವಸ್ಥಾನದ ಆಡಳಿತ ಮಂಡಲಿಗೆ ಬಿಜೆಪಿಯವರನ್ನೇ ಶಾಸಕಿ ನೇಮಕ ಮಾಡುತ್ತಿದ್ದಾರೆ, ದಿನ ನಿತ್ಯ ಬಿಜೆಪಿಗರ ಜೊತೆಯೇ ಇರುತ್ತಾರೆ. ಇದನ್ನೆಲ್ಲಾ ನೋಡುವಾಗ ಪುತ್ತೂರು ಶಾಸಕಿಯವರು ಯಾವ ಪಕ್ಷದಲ್ಲಿದ್ದಾರೆ ಎಂಬುದು ಅವರಿಗೇ ಗೊತ್ತಿಲ್ಲ” ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರು ಹೇಳಿಕೆ ನೀಡಿರುವುದನ್ನು ಸಮರ್ಥಿಸಿಕೊಂಡ ಯುವ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಕಲ್ಲೇಗ ಮತ್ತು ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಐ ಸಿ ಕೈಲಾಸ್ ಅವರು ಶಾಸಕಿ ಅವರ ಪಕ್ಷ ನಿಷ್ಟೆ ಬಗ್ಗೆ ಕಾಂಗ್ರೆಸ್ಸಿಗರಿಗೆ ಅನುಮಾನವಿದೆ ಎಂದರು.

ಮಾಧ್ಯಮದ ಜೊತೆ ಮಾತನಾಡಿದ ಅವರು, “ಪುತ್ತೂರು ಮತ್ತು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಜೆಡಿಎಸ್ ಜಿಲ್ಲಾಧ್ಯಕ್ಷರ ವಿರುದ್ದ ಪತ್ರಿಕಾ ಪ್ರಕಟಣೆ ನೀಡಿ ತಮ್ಮ ಅನುಮಾನವನ್ನು ಬಹಿರಂಗಪಡಿಸಿದ್ದಾರೆ. ಶಾಸಕಿಯವರು ಬಿಜೆಪಿಯನ್ನು ಓಲೈಕೆ ಮಾಡುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳ ಅಧ್ಯಕ್ಷತೆಗೆ ಬಿಜೆಪಿಯವರನ್ನು ನೇಮಕ ಮಾಡುತ್ತಿದ್ದಾರೆ. ಇದರಿಂದಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗುತ್ತಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರೇ ಆರೋಪಿಸುತ್ತಿದ್ದಾರೆ. ಅದನ್ನು ಜೆಡಿಎಸ್ ಜಿಲ್ಲಾಧ್ಯಕ್ಷರು ಉಲ್ಲೇಖಿಸಿದ್ದಾರೆ ಮಾತ್ರ” ಎಂದ ಅವರು, “ಮುಂದಿನ ದಿನಗಳಲ್ಲಿ ಅವರ ಪಕ್ಷದವರೇ ಅವರನ್ನು ಸೋಲಿಸುವ ಕೆಲಸ ಮಾಡಲಿದ್ದಾರೆ. ಕಾಂಗ್ರೆಸನ್ನು ಸೋಲಿಸಲು ಜೆಡಿಎಸ್ ಬೇಕಾಗಿಲ”್ಲ ಎಂದರು.