ಬಿಜೆಪಿ ಪ್ರಾಯೋಜಿತ ಎತ್ತಿನಹೊಳೆ ಸಭೆಯಲ್ಲಿ ಕಾಂಗ್ರೆಸ್ಸಿನ ಮೇಘನಾಥ

ಎತ್ತಿಹೊಳೆ ವಿರೋಧಿ ಸಭೆಯಲ್ಲಿ ಕಾಂಗ್ರೆಸ್ಸಿನ ಮೇಘನಾದ ಶೆಟ್ಟಿ

ಮುಲ್ಕಿ : ಕಿನ್ನಿಗೋಳಿಯಲ್ಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ನಡೆದ ಎತ್ತಿನ ಹೊಳೆ ವಿರೋದಿ ಹೋರಾಟ ಸಮಿತಿ ಸಭೆಯಲ್ಲಿ ಮೂಡಬಿದ್ರೆ ಕಾಂಗ್ರೆಸ್ ಧುರೀಣ ಮೇಘನಾಥ ಶೆಟ್ಟಿ ಕಾಣಿಸಿಕೊಂಡು  ಸಂಚಲನ ಉಂಟು ಮಾಡಿದರು.

ಸಭೆಯಲ್ಲಿ ಎದುರಿನ ಸಾಲಿನಲ್ಲಿ ಸುಚರಿತ ಶೆಟ್ಟಿ ಸಹಿತ ಬಿಜೆಪಿ ಕಾರ್ಯಕರ್ತರೊಡನೆ ಕುಳಿತುಕೊಂಡು ಮೂಡಬಿದ್ರೆ ಶಾಸಕ ಅಭಯಚಂದ್ರ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಎದಿರೇಟು ನೀಡಿದ್ದಾರೆ. ಹೆಸರಿಗೆ ಜನಜಾಗೃತಿ ಸಭೆಯಾಗಿದ್ದರೂ  ಬಿಜೆಪಿ ಕಾರ್ಯಕರ್ತರೇ ಸಭೆಯಲ್ಲಿ ಇದ್ದರು.

ಸಭೆ ಬಳಿಕ ಪರ್ತಕರ್ತರೊಡನೆ ಬಿಜೆಪಿ ಮೂಡಬಿದ್ರೆ ಮಂಡಲದ ಅಧ್ಯಕ್ಷ ಈಶ್ವರ ಕಟೀಲು ಮಾತನಾಡಿ, “ಮೇಘನಾದ ಶೆಟ್ಟಿ ಈಗಾಗಲೇ ಮೌಖಿಕವಾಗಿ ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಸಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು” ಎಂದು ತಿಳಿಸಿದ್ದು ಮತ್ತಷ್ಟು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.