ಎಪಿಎಂಸಿ ಚುನಾವಣೆ ಮುಲ್ಕಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಜಯ

ನಮ್ಮ ಪ್ರತಿನಿಧಿ ವರದಿ
ಮುಲ್ಕಿ : ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೂಲ್ಕಿ ಹೋಬಳಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.
ಮೂಲ್ಕಿ ಹೋಬಳಿ ಒಂದನೇ ವಾರ್ಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೋಯಲ್ ಡಿ’ಸೋಜಾ ಎದುರಾಳಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರವೀಂದ್ರ ಶೆಟ್ಟಿ ಎದುರು ಭರ್ಜರಿ ಜಯ ಸಾಧಿಸಿದ್ದರೆ,
ಮೂಲ್ಕಿ ಹೋಬಳಿ ಎರಡನೇ ವಾರ್ಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಮೋದ್ ಕುಮಾರ್ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಭಾಕರ ಶೆಟ್ಟಿಯನ್ನು ಅತ್ಯಧಿಕ ಬಹುಮತದಿಂದ ಸೋಲಿಸಿ ಮಂಗಳೂರು ಎಪಿಎಂಸಿ ಚುನಾವಣೆಯಲ್ಲಿ ಎರಡನೆ ಬಾರಿಗೆ ಗೆಲುವಿನ ನಗೆ ಬೀರಿದರು.
ಕಾಂಗ್ರೆಸ್ ಬೆಂಬಲಿತರು ಭರ್ಜರಿ ಜಯಗಳಿಸುತ್ತಿದ್ದಂತೆ ಮುಲ್ಕಿ-ಹಳೆಯಂಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸುವುದರೊಂದಿಗೆ ವಿಜಯೋತ್ಸವ ಮೆರವಣಿಗೆ ನಡೆಸಿದರು.
ಶಾಸಕ ಅಭಯಚಂದ್ರ ಮಾತನಾಡಿ ಸಿದ್ದರಾಮಯ್ಯ ಸರಕಾರದ ರೈತಪರ ಯೋಜನೆಗಳನ್ನುಮೆಚ್ಚಿಕೊಂಡು ಕೃಷಿಯನ್ನೇ ನೆಚ್ಚಿರುವ ರೈತರು ಕಾಂಗ್ರೆಸ್ ಪರ ಮತ ಚಲಾಯಿಸಿದ್ದಕ್ಕೆ ಹಾಗೂ ವಿದ್ಯಾರ್ಥಿ ಕಿಸಾನ್ ಮಿತ್ರರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧÀನಂಜಯ ಮಟ್ಟು ಮಾತನಾಡಿ ಬಿಜೆಪಿ ಬೆಂಬಲಿತರ ಅಪಪ್ರಚಾರಗಳಿಗೆ ಕಿವಿಗೆÉೂಡದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಕೃಷಿಕ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೆಪಿಸಿಸಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ವಸಂತ್ ಬೆರ್ನಾಡ್ ಹಳೆಯಂಗಡಿ ಮಾತನಾಡಿ ಜಿಪಂ, ತಾಪಂನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಜಯ ಕಾರ್ಯಕರ್ತರಿಗೆ ಸಲ್ಲಿಕೆಯಾಗುತ್ತದೆ ಎಂದು ಹೇಳಿದರು. ಈ ಸಂದರ್ಭ ಮುಲ್ಕಿ ನಪಂ ಸದಸ್ಯ ಪುತ್ತು ಬಾವ, ಅನಿತಾ ಝಾನೆಟ್ ಕಿನ್ನಿಗೋಳಿ, ದಿನೇಶ್ ಸುವರ್ಣ ಪಡುಪಣಂಬೂರು, ಅಬ್ದುಲ್ ಖಾದರ್, ಉಮೇಶ್ ಪೂಜಾರಿ ಸಂತಕಟ್ಟೆ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ವಾಹಿದ್ ತೋಕೂರು ಮತ್ತಿತರರು ಇದ್ದರು.