ಕಣ್ಣೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ

ಸಿಪಿಎಂ ಕೈವಾಡ: ಆರೋಪ

ಕಾಸರಗೋಡು : ಸೋಮವಾರ ತಡರಾತ್ರಿ ಕಣ್ಣೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಕಾರಿನಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳು ಮಟ್ಟಣೂರು ಸಮೀಪ ಕತ್ತಿಯಿಂದ ಕೊಚ್ಚಿ ಹತ್ಯೆಗೈದಿದ್ದಾರೆ. ಹತ್ಯೆಗೀಡಾದವನನ್ನು ಶೋಯೆಬ್ (30) ಎಂದು ಗುರುತಿಸಲಾಗಿದೆ. ಈ ಹತ್ಯೆಗೆ ಸಿಪಿಎಂ

ಕಾರ್ಯಕರ್ತರು ಕಾರಣ ಎಂದು ಕಾಂಗ್ರೆಸ್ ಆಪಾದಿಸಿದೆ. ಆದರೆ ಎಡ ಪಕ್ಷ ಮಾತ್ರ ಇದರಲ್ಲಿ ತನ್ನ ಪಾತ್ರವಿಲ್ಲವೆಂದು ಸ್ಪಷ್ಟಪಡಿಸಿದೆ.

ಶೋಯೆಬ್ ಹಾಗೂ ಕೆಲವರು ಮಟ್ಟಣೂರು ಸಮೀಪದ ಹೋಟೆಲ್ ಎದುರು ರಾತ್ರಿ 10.45ರ ಸುಮಾರಿಗೆ ನಿಂತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಲ್ಲಿದ್ದವರನ್ನು ಹೆದರಿಸಲು ನಾಡಬಾಂಬುಗಳನ್ನು ಎಸೆದಿದ್ದು ನಂತರ ಶೋಯೆಬ್ ಹತ್ಯೆಗೈದು ಪರಾರಿಯಾಗಿದ್ದರು.

ಹತ್ಯೆ ಖಂಡಿಸಿ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಮಂಗಳವಾರ ಬಂದ್ ಕರೆ ನೀಡಿದ್ದರೂ ವಾಹನಗಳಿಗೆ ಸಾಗಲು ಅನುಮತಿ ನೀಡಲಾಗಿತ್ತು.

 

LEAVE A REPLY