`ರಾಜ್ಯದಲ್ಲಿ ಅಧಿಕಾರ ಕಾಂಗ್ರೆಸ್ ಉಳಿಸಿಕೊಳ್ಳುವುದು ಶತಃಸಿದ್ಧ’

ಏಐಸಿಸಿ ಕಾರ್ಯದರ್ಶಿ ವಿಷ್ಣುನಂದ ಹೇಳಿಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವುದೇ ಕಾಂಗ್ರೆಸ್ ಮುಖ್ಯ ಗುರಿ” ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಪಿ ಸಿ ವಿಷ್ಣುನಂದ್ ಗುರುವಾರ ಹೇಳಿದ್ದಾರೆ.

“ಇದು ಕೇವಲ ಪಕ್ಷದ ಆಸೆ ಮಾತ್ರವಲ್ಲ, ಎಲ್ಲಾ ಜಾತ್ಯತೀತ ಪಡೆಗಳ ಬಯಕೆಯೂ ಆಗಿದೆ” ಎಂದು ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. “ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖಂಡತ್ವದ ರಾಜ್ಯ ಸರ್ಕಾರ ಹಲವು ಅಭಿವೃದ್ಧಿ ಯೋಜನೆ ಜಾರಿಗೊಳಿಸಿದೆ. ಪಕ್ಷದ ಕಾರ್ಯಕರ್ತರು ಈ ಯೋಜನೆಗಳ ಮಹತ್ವ ಮತ್ತು ಲಾಭಗಳನ್ನು ಜನರಿಗೆ ಪ್ರತಿಪಾದಿಸಲು ಸೂಚಿಸಲಾಗಿದೆ” ಎಂದು ಅವರು ಹೇಳಿದ್ದಾರೆ.