ನೆಹರೂ ಟೀಕಿಸಿದ ಮೋದಿಗೆ ರಾಜನಾಥ್ ನೀಡಿದ ಉತ್ತರ !

ಪ್ರಧಾನಿ ನರೇಂದ್ರ ಮೋದಿ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಮತ್ತು ಕಾಂಗ್ರೆಸ್ ವಿರುದ್ಧ ಸಂಸತ್ತಿನಲ್ಲಿ ನಡೆಸಿದ ಅನೈತಿಕ ಟೀಕೆಗೆ ಕಾಂಗ್ರೆಸ್ ಸರಿಯಾದ ಉತ್ತರ ನೀಡಿದೆ.

`ಥ್ಯಾಂಕ್ಯು ರಾಜನಾಥ್ ಸಿಂಗ್’ ಎಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಬಿಜೆಪಿ ಮುಖಂಡ ರಾಜನಾಥ್ ಸಿಂಗ್ ಭಾಷಣವನ್ನು ಟ್ಯಾಗ್ ಮಾಡಿದ್ದಾರೆ. ರಾಜನಾಥ ಸಿಂಗ್ 2015ರಲ್ಲಿ ದೆಹಲಿಯಲ್ಲಿ ನೆಹರು ಜಯಂತಿ ಪ್ರಯಕ್ತ ನಡೆದ ಕಾರ್ಯಕ್ರಮದಲ್ಲಿ ನವಭಾರತ ನಿರ್ಮಾಣದಲ್ಲಿ ನೆಹರೂ ಪಾತ್ರವನ್ನು ಕೊಂಡಾಡಿ ಮಾತನಾಡಿದ್ದರು.

ದೇಶದ ನಿರ್ಮಾಣ ಮತ್ತು ಜನರ ಕಲ್ಯಾಣಕ್ಕಾಗಿ ನೆಹರು ಅವರ ನೀಡಿದ ಕೊಡುಗೆಗಳನ್ನು ಕಡೆಗಣಿಸಲಾಗುವುದಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ ಭಾಷಣದ ತುಣುಕು ಅದಾಗಿದೆ.

“ನೆಹರು ಅವರನು ್ನಒಬ್ಬ ಕಾಂಗ್ರೆಸ್ಸಿಗ ಎಂದು ಗುರುತಿಸುವುದಿಲ್ಲ ; ಅವರನ್ನು ಅಪ್ರತಿಮ ರಾಷ್ಟ್ರೀಯ ನಾಯಕ” ಎಂದು ಗುರುತಿಸುವೆ ಎಂದು ರಾಜನಾಥ ಬಣ್ಣಿಸಿದ್ದರು.

“ನೆಹರು ಅವರಂಥ ನಾಯಕರ ಮಹೋನ್ನತ ಕೊಡುಗೆಯಿಂದಾಗಿಯೇ ಭಾರತ, ಸ್ವಾಯತ್ತ ನ್ಯಾಯಾಂಗ

ಮತ್ತು ನಿರ್ಭಯ ಮಾಧ್ಯಮ ವ್ಯವಸ್ಥೆಯನ್ನು ಹೊಂದಿದೆ. ಇಡೀ ಜಗತ್ತಿನಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದೆನಿಸಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದರು.

“ನೆಹರು ಅವರ ನಾಯಕತ್ವದಲ್ಲಿ ಭಾರಿ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು. ಕೈಗಾರಿಕೀಕರಣಕ್ಕೆ ಒತ್ತು ನೀಡಿದರೂ ಅವರು ಕೃಷಿಯನ್ನು ಮರೆಯಲಿಲ್ಲ” ಎಂದು ಅವರು ಗುಣಗಾನ ಮಾಡಿದ್ದರು.

ಕಳೆದ ಬುಧವಾರ ಮೋದಿ ಸಂಸತ್ತಿನಲ್ಲಿ ನೆಹರೂ ಅವರ ವ್ಯಕ್ತಿತ್ವವನ್ನು ಸಣ್ಣದು ಮಾಡುವ ಯತ್ವ ನಡೆಸಿದ್ದರು. ಕಾಂಗ್ರೆಸ್ ಮರುದಿನವೇ ರಾಜನಾಥ್ ಅವರ ಅಧಿಕೃತ ಭಾಷಣದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಬಿಡುಗಡೆ ಮಾಡಿತ್ತು.

ಕೇಂದ್ರ ಸಚಿವರೇ ನೆಹರೂ ಗುಣಗಾನ ಮಾಡಿರುವುದು ದೇಶದಾದ್ಯಂತ ವೈರಲ್ ಆಗಿರುವುದು ಸರಕಾರಕ್ಕೆ ಮುಜುಗರ ತಂದಿದೆ.

 

 

 

LEAVE A REPLY