`ಮೋದಿ ಜಿಂದಾಬಾದ್’ ಕೂಗಿದ ಕಾಂಗ್ರೆಸ್ಸಿಗರು !

ಪಾಟ್ನಾ : ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೌಕಬ್ ಖಾದ್ರಿ ಮತ್ತು ಸಮಿತಿಯ ಮಾಜಿ ಅಧ್ಯಕ್ಷ ಅಶೋಕ್ ಚೌಧರಿ ಬೆಂಬಲಿಗರ ಮಧ್ಯೆ ತೀವ್ರ ಕೋಲಾಹಲಕಾರಿ ಭಿನ್ನಮತ ಉಂಟಾಗಿದ್ದು, ಚೌಧರಿ ಬಣ `ನರೇಂದ್ರ ಮೋದಿ ಜಿಂದಾಬಾದ್’ ಎಂದು  ಘೋಷಣೆಗಳನ್ನು ಕೂಗುತ್ತ ಖಾದ್ರಿ ಬಣವನ್ನು ಅಣಕಿಸಿದ ಘಟನೆ ನಡೆದಿದೆ. ಯಾವುದೇ ಪೂರ್ವ ಮಾಹಿತಿ ನೀಡದೆ ತನ್ನನ್ನು ಹುದ್ದೆಯಿಂದ ಕಿತ್ತು ಹಾಕಿರುವುದರಿಂದ `ಅವಮಾನ’ವಾಗಿದೆ, ಬಿಹಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೀಪಿ ಜೋಶಿ ಪಕ್ಷದ ಹೈಕಮಾಂಡಿನ ದಾರಿ ತಪ್ಪಿಸುತ್ತಿದ್ದಾರೆಂದು ಮಾಜಿ ಅಧ್ಯಕ್ಷ ಚೌಧರಿ ಕಿಡಿ ಕಾಡಿದರು.