ಕೇರಳದಲ್ಲಿ ಕಾಂಗ್ರೆಸ್ ನಾಯಕರ ಬಂಧನ

 

ತಿರುವನಂತಪುರಂ : ನೋಟು ಅಪಮೌಲ್ಯೀಕರಣ ವಿರುದ್ಧ ನಿನ್ನೆ ದೇಶಾದ್ಯಂತ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪ್ರತಿಭಟನಾರ್ಥ ರಾಜ್ಯದ ತಿರುವನಂತಪುರಂ ಮತ್ತು ಕೋಝಿಕ್ಕೋಡಿನಲ್ಲೂ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಈ ಸಂದರ್ಭದಲ್ಲಿ ಸಂಭವಿಸಿದ ವಿಪಕ್ಷ ನಾಯಕ ರಮೇಶ್ ಚೆನ್ನಿತಾಲ, ಕೆಪಿಸಿಸಿ ಅಧ್ಯಕ್ಷ ಸುಧೀರನ್, ಸಂಸದ ಶಶಿ ಥರೂರ್ ಮೊದಲಾದ ಕಾಂಗ್ರೆಸ್ ನಾಯಕರು ಕೋರ್ಟ್ ಅರೆಸ್ಟ್ ಆದರು. ಬಳಿಕ ಇವರೆಲ್ಲರೂ ಬಿಡುಗಡೆಯಾಗಿದ್ದಾರೆ.

ಪ್ರತಿಭಟನೆ ವೇಳೆ ತಿರುವನಂತಪುರಂ ಮತ್ತು ಕೋಝಿಕ್ಕೋಡಿನಲ್ಲಿ ಸಂಭವಿಸಿದ ಸಣ್ಣ ಹೊೈಕೈ ಘಟನೆಯನ್ನನುಸರಿಸಿ, ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದಾಗ ಪಕ್ಷದ ಹಿರಿಯ ನಾಯಕರು ಬಂಧನಕ್ಕೊಳಗಾದರು.