ಜಯಪ್ರಕಾಶ್ ರಾಜಕೀಯ ದಾರಿ ಗೊಂದಲದ ಗೂಡು

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಕಳೆದ 6 ತಿಂಗಳುಗಳಿಂದ ಗೊಂದಲದ ಗೂಡಾಗಿದ್ದ ಮಾಜಿ ಸಂಸದ  ಜಯಪ್ರಕಾಶ್ ಹೆಗ್ಡೆ ಅವರ ರಾಜಕೀಯ ನಿಲುವು ನಿನ್ನೆ ಬ್ರಹ್ಮಾವರದ ಆಶ್ರಯ ಹೋಟೇಲಿನಲ್ಲಿ ನಡೆದ ಸಭೆಯಲ್ಲಿ ಅಂತಿಮಗೊಳ್ಳಲಿದೆ ಎನ್ನುವ ಲೆಕ್ಕಾಚಾರ ತಲೆ ಕೆಳಗಾಗಿದೆ. ಸಂಜೆ 4.30ಕ್ಕೆ ಆರಂಭಗೊಂಡ ಅಭಿಮಾನಿಗಳ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಲ್ಲಿ ಶೇ 85ರಷ್ಟು ಮಂದಿ ಬಿಜೆಪಿ ಸೇರಲು ಒಪ್ಪಿದರೆ, ಶೇ 5ರಷ್ಟು ಮಂದಿ ಜೆಡಿಎಸ್‍ಗೆ ಹೋಗಿ ಎಂದಿದ್ದಾರೆ.

ಶೇ 10 ಮಂದಿ ಕಾಂಗ್ರೆಸ್‍ಗೆ ಮರಳಿ ಎಂದಾಗ ಉದ್ರೇಕಗೊಂಡ ಹೆಗ್ಡೆ ಪ್ರತಿಕ್ರಿಯಿಸಿ, “ನಾನೇನೂ ಕಾಂಗ್ರೆಸ್ ಪಕ್ಷ ತೊರೆದಿಲ್ಲ.

ಕಾಂಗ್ರೆಸ್ ಪಕ್ಷದ ನಾಯಕರೇ ನನ್ನ ಮೇಲೆ ಗೂಬೆ ಕೂರಿಸಿ ಹೊರಗಿಟ್ಟಿದ್ದಾರೆ. ಮತ್ತೆ ಕಾಂಗ್ರೆಸ್ ಯಾಕೆ ಸೇರಬೇಕು?” ಎಂದು ಪ್ರಶ್ನಿಸಿದ್ದಾರೆ.

ಕೊನೆಗೂ ಸಭೆಯಲ್ಲಿ ಅಂತಿಮ ನಿರ್ಣಯಕ್ಕೆ ಬರಲಾಗಿಲ್ಲ. ನಂತರ ಮತ್ತೆ ಮಾತನಾಡಿದ ಹೆಗ್ಡೆ, ಚಿಕ್ಕಮಗಳೂರಿನಲ್ಲಿಯೂ ಸಭೆ ನಡೆಸಿ ಅಲ್ಲಿನ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಮತ್ತು ನನ್ನ ಹಿತೈಷಿಗಳು ಸಭೆಗೆ ಬರಲಾಗದೇ ಇದ್ದಲ್ಲಿ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಬಹುದು ಎಂದರು.