ಬಸ್ಸಿನಲ್ಲಿ ಮುಸ್ಲಿಂ ಯುವತಿ ಮುಟ್ಟಿದ ನಿರ್ವಾಹಕ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಖಾಸಗಿ ಬಸ್ಸಿನಲ್ಲಿ ಸಂಚರಿಸುತ್ತಿದ್ದ ಯುವತಿಯೊಬ್ಬಳಿಗೆ ಬಸ್ ನಿರ್ವಾಹಕ ಮೈ ಸ್ಪರ್ಶಿಸಿದ್ದರಿಂ ರಾದ್ಧಾಂತÀ ನಡೆದಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಮಂಜೇಶ್ವರ ಮೂಲದ ರೀತೇಶ್ (30) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಾಣೆಮಂಗಳೂರು ಸಮೀಪದ ನೆಹರುನಗರ ನಿವಾಸಿ ಮುಸ್ಲಿಂ ಯುವತಿ ತನ್ನ ಸಂಬಂಧಿ ಯುವತಿ ಹಾಗೂ ಯುವಕನ ಜೊತೆ ಮಂಗಳೂರು-ಪುತ್ತೂರು ಮಾರ್ಗದ ಖಾಸಗಿ ಬಸ್ಸಿನಲ್ಲಿ ಬಿ ಸಿ ರೋಡಿಗೆ ಪ್ರಯಾಣಿಸುತ್ತಿದ್ದ ವೇಳೆ ಬಸ್ಸಿನ ಹಿಂಭಾಗದಲ್ಲಿದ್ದ ಸಂಬಂಧಿಕ ಯುವಕ ಮೊದಲೇ ಟಿಕೆಟ್ ಖರೀದಿಸಿದ್ದರೂ ಬಳಿಕ ಬಸ್ಸಿನ ಮುಂಭಾಗಕ್ಕೆ ಬಂದ ನಿರ್ವಾಹಕ ಯುವತಿಯ ಮೈ ಮುಟ್ಟಿ ಟಿಕೆಟ್ ಕೇಳಿದ್ದಾನೆ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಯುವತಿ ನಿರ್ವಾಹಕನಿಗೆ ಬಸ್ಸಿನಲ್ಲೇ ಪ್ರಶ್ನಿಸಿದ್ದು, ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಕ್ಷಣ ಕಾರ್ಯಪ್ರವೃತ್ತರಾದ ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ಬಳಿಕ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.