ಹೊಸಂಗಡಿ ಗೇಟಿನಿಂದ ಉದ್ಯಾವರ ರೈಲ್ವೇ ಗೇಟ್ ತನಕ ಕಾಂಕ್ರೀಟ್ ಕಾಮಗಾರಿ ಶುರು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಹೊಸಂಗಡಿ ಗೇಟಿನಿಂದ ಉದ್ಯಾವರ ರೈಲ್ವೇ ಗೇಟ್ ತನಕ 15.9 ಕಿ ಲೋ ಮೀಟರ್ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ 9 ಕೋಟಿ ರೂ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ದೊರಕಿದೆ.

ಈ ಮೊದಲು ನಿರ್ಮಿಸಲಾಗಿದ್ದ ರಸ್ತೆ ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದಾಗಿ ಒಂದು ವರ್ಷದೊಳಗೆಯೇ ವಾಹನ ಸಂಚಾರಕ್ಕೆ ಅಯೋಗ್ಯವಾಗಿತ್ತು. ಬಳಿಕ ಊರವರ ಒತ್ತಾಯಕ್ಕೆ ಮಣಿದು ಲೋಕೋಪಯೋಗಿ ಇಲಾಖೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ.

ಎರಡು ತಿಂಗಳ ತನಕ ನಡೆಯುವ ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿಯೂ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಒಂದು ಭಾಗದಿಂದ ಸೌಕರ್ಯ ಒದಗಿಸಿಕೊಡಲು ಪ್ರಯತ್ನಿಸುವುದಾಗಿ ಲೋಕೋಪಯೋಗಿ ಅಸಿಸ್ಟಂಟ್ ಇಂಜಿನಿಯರ್ ತಿಳಿಸಿದ್ದಾರೆ.