ಹೆದ್ದಾರಿ ವಾಹನ ಶುಲ್ಕ ಪಾವತಿ ವಿನಾಯ್ತಿ ಇರಲಿ

ಪ್ರಜೆಗಳು ಪಾವತಿಸುವ ಆದಾಯ ತೆರಿಗೆ ಹಣದಿಂದ ಶಾಲೆ  ಆಸ್ಪತ್ರೆ  ಸೇತುವೆ  ರಸ್ತೆ  ಇತ್ಯಾದಿ ನಿರ್ಮಿಸಲಾಗುತ್ತದೆ ಎಂದು ಸರಕಾರ ಹೇಳುತ್ತದೆ  ಇಂಥ ಕರದಾತರು ಸರಕಾರಿ ಶಾಲೆ  ಆಸ್ಪತ್ರೆ ಬಳಸುವುದು ಕಮ್ಮಿ  ಆದ್ದರಿಂದ ಆದಾಯ ತೆರಿಗೆ ಪಾವತಿಸಿದ ದಾಖಲೆ ಹೊಂದಿರುವ ವಾಹನಗಳಿಗೆ ಹೆದ್ದಾರಿ ಶುಲ್ಕ ಪಾವತಿಯಿಂದ ವಿನಾಯ್ತಿ ಸಿಗುವಂತಾಗಲಿ  ಇದರಿಂದ ಜನಸಂಖ್ಯೆಯ ಕೇವಲ 1 ಶೇಕಡದಷ್ಟಿರುವ ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ಪ್ರೋತ್ಸಾಹಿಸದಂತಾಗುತ್ತದೆ

  • ಚಿದಂಬರ ಕಾಕತ್ಕರ್  ಮಂಗಳೂರು