ತಲಪಾಡಿಯಲ್ಲಿನ ಮದ್ಯದಂಗಡಿಗೆ ತೆರವಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದವರ ವಿರುದ್ಧವೇ ದೂರು ದಾಖಲು

ಮಂಗಳೂರು : ಜನನಿಬಿಡ ಪ್ರದೇಶವಾಗಿರುವ ತಲಪಾಡಿ ನಾರ್ಲಪಡೀಲಿನಲ್ಲಿ ಮದ್ಯದಂಗಡಿ ತೆರೆಯುವುದನ್ನು ಖಂಡಿಸಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪ್ರತಿಭಟನೆ ನಡೆಸಿದ್ದರು. ಆದರೆ ಇದೀಗ ಪ್ರತಿಭಟನೆ ನಡೆಸಿದವರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರತಿಭಟನೆ ನಡೆಸಿದ ಅಮಾಯಕ ಮಂದಿ ಆತಂಕಗೊಂಡಿದ್ದಾರೆ. ಸುಳ್ಳು ಪ್ರಕರಣ ದಾಖಲಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಜಿಲ್ಲಾಡಳಿತಕ್ಕೆ, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರಿಗೆ ಮನವಿ ನೀಡಿದ್ದಾರೆ. ಪೊಲೀಸ್ ಆಯುಕ್ತರ ಅನುಪಸ್ಥಿತಿಯಲ್ಲಿ ಡಿಸಿಪಿ ಉಮಾಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.

ಅತ್ಯಂತ ಜನನಿಬಿಡ ಪ್ರದೇಶವಾಗಿ ಗುರುತಿಸಿಕೊಂಡಿರುವ ಗಡಿನಾಡು ತಲಪಾಡಿಯ ನಾರ್ಲಪಡೀಲಿನಲ್ಲಿ ಮದ್ಯದಂಗಡಿ ನಿರ್ಮಾಣಕ್ಕೆ ಎಲ್ಲಾ ಸಿದ್ಧತೆ ನಡೆದಿತ್ತು. ಕಟ್ಟಡ ಕೂಡಾ ನಿರ್ಮಾಣವಾಗಿದೆ. ಆದರೆ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯುವುದಕ್ಕೆ ಅವಕಾಶ ನೀಡಬಾರದು ಎಂದು ಸ್ಥಳೀಯರು ತಲಪಾಡಿ ಗಡಿನಾಡು ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿಭಟನೆಯನ್ನೂ ನಡೆಸಿದ್ದರು.

ಸಾರ್ವಜನಿಕರು ಪ್ರತಿಭಟನೆ ನಡೆಸಿದ ಅದೇ ದಿನದಂದು ಮದ್ಯದಂಗಡಿ ಕಟ್ಟಡಕ್ಕೆ ಕಿಡಿಗೇಡಿಗಳು ದಾಂದಲೆ ನಡೆಸಿ ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದರು. ಪೈಪುಗಳನ್ನು ತುಂಡರಿಸಿ ಹಾನಿ ಎಸಗಿದ್ದರು. ಆದರೆ ಈ ಕೃತ್ಯವನ್ನು ಪ್ರತಿಭಟನೆ ನಡೆಸಿದವರೇ ಮಾಡಿದ್ದಾರೆಂದು ಆರೋಪಿಸಿದ ಮದ್ಯದಂಗಡಿ ಮಾಲಕರು ಉಳ್ಳಾಲ ನಗರ ಠಾಣೆಗೆ ದೂರು ನೀಡಿದ್ದಾರೆ.

ಈ ದೂರನ್ನು ಕಂಡು ಆತಂಕಗೊಂಡ ಪ್ರತಿಭಟನಾಕಾರರು ವೇದಿಕೆ ಅಧ್ಯಕ್ಷ ಸಿದ್ಧಿಕ್ ತಲಪಾಡಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರಿಗೆ ಮನವಿ ನೀಡಿದೆ. ಮನವಿಯನ್ನು ಡಿಸಿಪಿ ಉಮಾಪ್ರಸಾದ್ ಅವರಿಗೆ ಸಲ್ಲಿಸಲಾಯಿತು.ಈ ಸಂದರ್ಭ ಮಾತನಾಡಿದ ಸಿದ್ಧೀಕ್ ತಲಪಾಡಿ, ಯಾರೋ ಕಿಡಿಗೇಡಿಗಳು ನಡೆಸಿದ ಕೃತ್ಯದ ಆರೋಪ ನಮ್ಮ ಮೇಲೆ ಹಾಕಿದ್ದಾರೆ. ನಾವು ಮದ್ಯದಂಗಡಿ ತೆರವುಗೊಳಿಸಬೇಕೆಂದು ಹೋರಾಟ ನಡೆಸಿದ್ದು ನಿಜ. ಆದರೆ ಅಂಗಡಿಗೆ ಕಲ್ಲೆಸೆದು ಹಾನಿ ಮಾಡಿಲ್ಲ. ತಲಪಾಡಿಯಲ್ಲಿ ಯಾವುದೇ ಕಾರಣಕ್ಕೂ ನಾವು ಬಾರ್ ನಿರ್ಮಿಸಲು ಅವಕಾಶ ನೀಡಲ್ಲ ಎಂದರು.