`ಜಿಲ್ಲೆಯ ಕೋಮುಗಲಭೆಗಳಿಗೆ ಕೋಮು ಸಂಘಟನೆಗಳೇ ಕಾರಣ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಿಷೇಧ ಮಾಡುವುದಾದರೆ, ಎರಡೂ ಕಡೆಗಳ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

“ಪಿಎಫೈ, ಎಸ್ಡಿಪಿಐ ಒಂದೆಡೆಯಾದರೆ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರೂ 9 ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಪ್ರಸ್ತುತ ಮಂತ್ರಿಗಳು ಪ್ರವಾಸದಲ್ಲಿದ್ದು ಅವರ ಪ್ರವಾಸ ಮುಕ್ತಾಯವಾದ ಬಳಿಕ ಸಂಘಟನೆಗಳ ನಿಷೇಧದ ಬಗ್ಗೆ ಮತ್ತೆ ಮಾತುಕತೆ ನಡೆಸುತ್ತೇವೆ. ಸಂಘಟನೆಗಳು ಸುಮ್ಮನಿದ್ದರೆ ಯಾವುದೇ ಸಂಘರ್ಷಗಳು, ವಿವಾದಗಳೂ ಇರುವುದಿಲ್ಲ. 29 ಜಿಲ್ಲೆಗಳಲ್ಲಿ ಇರದೇ ಇರುವ ಕೋಮು ಸಂಘರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಹೆಚ್ಚಾಗಿದೆ. ಇದಕ್ಕೆ ಕೋಮುವಾದಿ ಸಂಘಟನೆಗಳೇ ಕಾರಣ. ಜನರಿಗೆ ಇದ್ಯಾವುದೂ ಬೇಕಾಗಿಲ್ಲ. ಸಂಘಟನೆಗಳು ಸುಮ್ಮನಿದ್ದರೆ, ಇಂತಹ ಘಟನೆಗಳೂ ನಡೆಯುವುದಿಲ್ಲ” ಎಂದು ಗೃಹ ಸಚಿವರು ಗುಡುಗಿದರು.

“ಮೇಸ್ತ ಪ್ರಕರಣದಲ್ಲಿ ತೋರಿದ ಆಸ್ತೆ ಧನ್ಯಶ್ರೀಗೆ ಏಕಿಲ್ಲ ಎಂದು ಪ್ರಶ್ನಿಸಿದ ಗೃಹ ಸಚಿವರು, ಇಲ್ಲಿ ಬಿಜೆಪಿಯವರ ದ್ವಂದ್ವ ನಿಲುವು ಬಯಲಾಗಿದೆ. ಪರೇಶ ಮೇಸ್ತ ಪ್ರಕರಣದಲ್ಲಿ ನಮ್ಮ ಕಾರ್ಯಕರ್ತನ ಕೊಲೆ ಅಗಿದೆ ಎಂದು ಬೊಬ್ಬೆ ಇಟ್ಟವರು, ಇಂದು ಅವರದ್ದೆ ಪಕ್ಷದ ಮುಖಂಡ ಮಾಡಿರುವ ಅಪರಾಧವನ್ನು ಖಂಡಿಸುವುದಕ್ಕೂ ಹೋಗಿಲ್ಲ” ಎಂದು ಟೀಕಿಸಿದರು. “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೆ ಇದೆ. ಆದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಪೆÇಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಮೂರೂ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ” ಎಂದರು.

 

LEAVE A REPLY