ಮೋದಿಗೆ ಚೆಲ್ಲಾಟ, ಜನರಿಗೆ ಪ್ರಾಣ ಸಂಕಟ

ಕಪ್ಪು ಹಣ ಹೊರ ತರುವ ಹಿನ್ನೆಲೆಯಲ್ಲಿ 500 ರೂಪಾಯಿ 1000 ರೂಪಾಯಿ ಮುಖಬೆಲೆ ನೋಟನ್ನು ಕೇಂದ್ರ ಸರಕಾರ ನಿಷೇಧಿಸಿ ಜನರ ನೆಮ್ಮದಿಯನ್ನು ಸಂಪೂರ್ಣವಾಗಿ ಹಾಳುಗೆಡವಿದೆ  ಅಲ್ಲದೆ ರಾತ್ರಿ ಬೆಳೆಗಾಗುವುದರೊಂದಿಗೆ ದಿನಕ್ಕೊಂದು ಹೊಸ ನಿಯಮ ಜಾರಿಗೆ ತಂದು ಜನರ ಆತಂಕ ತೀವ್ರವಾಗಿಸಿದೆ
ಇಂದು ಎಷ್ಟೋ ಹಳ್ಳಿಗಳಲ್ಲಿ ಕುಡಿಯಲು ಸರಿಯಾಗಿ ನೀರಿಲ್ಲ. ಮೊಬೈಲುಗಳಿಗೆ ಸಿಗ್ನಲ್ಲೇ ಸಿಗುತ್ತಿಲ್ಲ  ಎಷ್ಟೋ ಮಂದಿಗೆ ಎಟಿಎಂ ಎಂದರೆ ಏನು ಎಂದೇ ತಿಳಿಯದು. ಇಂತಹ ಸ್ಥಿತಿ ಇರುವಾಗ ಮೋದಿ ಸರಕಾರದ ನಗದುರಹಿತ ವಹಿವಾಟು ಹೇಗೆ ಸಾಧ್ಯ   ವಿದ್ಯಾವಂತ ಯುವಕರು ಉದ್ಯೋಗವಿಲ್ಲದೆ ಬೀದಿ ಬೀದಿ ಅಲೆಯುತ್ತಾ ಅಡ್ಡ ದಾರಿಗೆ ಇಳಿಯತ್ತಿದ್ದಾರೆ. ಹೀಗೆಲ್ಲ ಇರುವಾಗ ಭಾರತ ಅತೀ ಶೀಘ್ರದಲ್ಲಿ ಡಿಜಿಟಲ್ ಇಂಡಿಯಾ ಆಗುವುದು ತಿರುಕನೇ ಕನಸೇ ಸರಿ. ಹಾಗಾಗಿ ಪ್ರಧಾನಿ ಮಾಡಬೇಕಾದ ಕೆಲಸವನ್ನು ಮಾಡದೇ ತಮ್ಮನ್ನು ತಾವು ವೈಭವೀಕರಿಸಿಕೊಳ್ಳುತ್ತಿರುವುದು ನಿಜಕ್ಕೂ ಖಂಡನೀಯ

  • ಕೆ ಅಬ್ದುಲ್ ಸಮದ್  ಫರಂಗಿಪೇಟೆ