ಬದ್ಧತೆ ಬೇಕು ಪ್ಲಾಸ್ಟಿಕ್ ನಿಷೇಧಕ್ಕೆ

ಸ್ವಚ್ಛತೆ ಬಗ್ಗೆ ದೇಶದಲ್ಲಿ ಹೊಸ ಸಂಚಲನ ಉಂಟಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನನ್ನು ವಿಮರ್ಶೆಗೆ ಒಡ್ಡಿಕೊಳ್ಳುತ್ತಿದ್ದಾನೆ. ಪರಿಸರದ ಕಾಳಜಿಯಿಂದ ಯೋಚಿಸತೊಡಗಿದ್ದಾರೆ ಎಂದು ಮೇಲ್ನೋಟಕ್ಕೆ ಭಾಸವಾಗುತ್ತದೆ. ಆದರೆ ಈ ಕಾಳಜಿ ಎಷ್ಟರಮಟ್ಟಿಗೆ ಫಲಪದ್ರವಾಗಿದೆ ಎಂಬುದೇ ಒಂದು ದೊಡ್ಡ ಪ್ರಶ್ನೆ ನಾವು ಪೇಟೆಯಿಂದ ಖರೀದಿಸುವ ನಿತ್ಯ ಉಪಯೋಗಿ ವಸ್ತುಗಳು ಇತ್ತೀಚಿನ ದಿನಗಳಲ್ಲಿ ಕಾಗದದ ಬದಲಾಗಿ ಪಾಲಿಥಿನ್ ಪ್ಲಾಸ್ಟಿಕ್ಕುಗಳಲ್ಲಿ ಪ್ಯಾಕ್ ಆಗಿ ಬರುತ್ತಿವೆ. 40 ಮೈಕ್ರಾನಿಗಿಂತ ಕಡಿಮೆ ದಪ್ಪದ ಪಾಲಿಥಿನ್ ಸರಕಿನ ಮೇಲೆ ನಿಷೇಧವಿದ್ದರೂ ಈಗಲೂ ಅವುಗಳನ್ನು ಉಪಯೋಗಿಸುತ್ತಿದ್ದಾರೆ. ತರಕಾರಿ, ಹಣ್ಣು, ಸಿದ್ಧ ಆಹಾರ ಇವೆಲ್ಲವೂ ಈಗ ಪರಿಸರಕ್ಕೆ ಹಾನಿ ಒಡ್ಡುವ ಪ್ಲಾಸ್ಟಿಕ್ ಪ್ಯಾಕಿನಲ್ಲಿ ಮಾರಾಟವಾಗುತ್ತಿವೆ ಪ್ಲಾಸ್ಟಿಕ್ ಅಥವಾ ಪಾಲಿಥಿನ್ನಿನಲ್ಲಿ ಇಲ್ಲದ ವಸ್ತುಗಳನ್ನು ನಾವು ಕಣ್ಣು ಎತ್ತಿದರೂ ನೋಡುವುದಿಲ್ಲ. ನಿತ್ಯ ಉಪಯೋಗಿ ವಸ್ತುಗಳ ಉತ್ಪಾದಕರು, ಮಾರಾಟಗಾರರು ತಾವು ಮಾರುವ ವಸ್ತುಗಳನ್ನು ಹೆಚ್ಚು ಆಕರ್ಷಣೀಯವಾಗಿ ಬಹಳ ದಿನಗಳವರೆಗೂ ಬಾಳಿಕೆ ಬರಲಿ ಎಂಬ ಕಾರಣದಿಂದ ಸರಕನ್ನು ಪ್ಲಾಸ್ಟಿಕ್ಕುಗಳಲ್ಲಿ ಪ್ಯಾಕ್ ಮಾಡುವುದಲ್ಲದೆ ಅದರ ಖರ್ಚನ್ನು ನಮ್ಮಿಂದಲೇ ವಸೂಲಿ ಮಾಡುತ್ತಾರೆ. ಒಂದರ್ಥದಲ್ಲಿ ನಾವು ಕೊಳ್ಳುವ ಸರಕಿನ ಜತೆ ಜತೆಗೆ ಈ ಕಸಕ್ಕೂ ಬೆಲೆ ತೆತ್ತು ಸಂಭ್ರಮದಿಂದ ಮನೆಗೆ ಕೊಂಡೊಯ್ಯುತ್ತಿದ್ದೇವೆ. ಈ ಕಸವನ್ನೇ ಮನೆಯ ಅಂಗಳದಲ್ಲಿ, ರಸ್ತೆಯಲ್ಲಿ ಎಸೆಯುತ್ತಿದ್ದೇವೆ ಪರೋಕ್ಷವಾಗಿ ಮಾಲಿನ್ಯಕ್ಕೆ ನಮ್ಮದೇ ಕೊಡುಗೆಯನ್ನು ನೀಡುತ್ತಿದ್ದೇವೆ ಪರಿಸರದ ಬಗ್ಗೆ ನೈರ್ಮಲ್ಯದ ಬಗ್ಗೆ ವೀರಾವೇಶದಿಂದ ಮಾತನಾಡುವ ನಾವೆಲ್ಲಾ ಪ್ಲಾಸ್ಟಿಕ್ ರಹಿತ ಜೀವನಕ್ಕಾಗಿ ತುಡಿಯುತ್ತಿಲ್ಲ ಪ್ಲಾಸ್ಟಿಕ್ ನಿಷೇಧಕ್ಕೆ ಬದ್ಧತೆ ತೋರದ ಹೊರತಾಗಿ ಯಾವ ಅಭಿಯಾನವೂ ಯಶಸ್ವಿಯಾಗಲಾರದು ಎಂಬುದನ್ನು ಅರಿತು ನಡೆಯೋಣ

  • ಸುಂದರ್ ಸುವರ್ಣ  ಯೆಯ್ಯಾಡಿ

LEAVE A REPLY