ನಳಿನ್ ಹೇಳಿಕೆ ವಿರುದ್ಧ ಪೊಲೀಸ್ ಆಯುಕ್ತರಿಂದ ತನಿಖೆ ಗೃಹ ಸಚಿವ

ಮಂಗಳೂರು :  ಉಳ್ಳಾಲದಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವ ಸಂಸದ ನಳಿನ್ ವಿರುದ್ಧ ದೂರು ದಾಖಲಿಸಲಾಗಿದೆ  ಅವರ ಪ್ರಚೋದನಕಾರಿ ಭಾಷಣದ ಬಗ್ಗೆ ಪೊಲೀಸ್ ಆಯುಕ್ತರು ತನಿಖೆ ನಡೆಸಲಿದ್ದಾರೆ  ಎಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು
ಬೆಂಗಳೂರಿನ ವಿಕಾಸಸೌಧದಲ್ಲಿ ಹೇಳಿಕೆ ನೀಡಿರುವ ಅವರು  ಆಯುಕ್ತರ ತನಿಖೆ ಬಳಿಕ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ  ಕೊಲೆ ಆರೋಪಿಗಳನ್ನು ಬಂಧಿಸದಿದ್ದರೆ ಸಂಸದರು ಪೊಲೀಸರನ್ನು ಪ್ರಶ್ನಿಸಬಹುದಿತ್ತು  ಅವರ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡಬಹುದಾಗಿತ್ತು ರಾಜ್ಯ ಸರಕಾರ ನಿರ್ಲಕ್ಷ್ಯ ಮಾಡಿದ್ದರೆ ಲೋಕ ಸಭೆಯಲ್ಲಿ ಮಾತನಾಡಬಹುದಿತ್ತು  ಆದರೆ ಇದ್ಯಾವುದನ್ನೂ ಮಾಡದ ಸಂಸದರು ಜಿಲ್ಲೆಗೆ ಬೆಂಕಿ ಕೊಡ್ತೀನಿ ಅಂದಿದ್ದು ಸರಿಯಲ್ಲ  ಸಂಸದರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು  ಎಂದು ಗೃಹ ಸಚಿವರು ಹೇಳಿದರು