ಕಾಟಿಪಾಳ್ಳ ದೀಪಕ್ ಕೊಲೆ ಪ್ರಕರಣದಲ್ಲಿ ಕರ್ತವ್ಯ ನಿಷ್ಠೆ ಮೆರೆದ ಹೋಂ ಗಾರ್ಡ್ ಸಿಬ್ಬಂದಿಗೆ ಪೆÇಲೀಸ್ ಆಯುಕ್ತ ಸನ್ಮಾನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜನವರಿ 3ರಂದು ನಗರದ ಸುರತ್ಕಲ್ ಕಾಟಿಪಾಳ್ಳದಲ್ಲಿ ನಡೆದ ದೀಪಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಮಾಡಿ ತಪ್ಪಿಸಲು ಪ್ರಯತ್ನ ಪಟ್ಟ ಆರೋಪಿಗಳನ್ನು ಹಿಡಿಯಲು ಮುಲ್ಕಿ ಪೆÇಲೀಸ್ ಠಾಣಾ ವ್ಯಾಪ್ತಿಯ ಉಲ್ಲಂಜೆ ಎಂಬ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ವಾಹನವನ್ನು ತಪಾಸಣೆ ಮಾಡುತ್ತಿದ್ದ ಸಮಯ ಆರೋಪಿಗಳು ಸಂಚರಿಸಿದ ಕಾರನ್ನು ತಡೆಯಲು ಪ್ರಯತ್ನಿಸಿದ್ದು, ಪ್ರಕರಣದ ಆರೋಪಿಗಳ ಪತ್ತೆಗೆ ತಮ್ಮ ಸಮಯಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಯನ್ನು ಮೆರೆದ ಗೃಹ ರಕ್ಷಕ ದಳದ ಸಿಬ್ಬಂದಿ ಮಲ್ಲಿಕಾ ಬಿ ಮತ್ತು ಹರೀಶ್ ಪೂಜಾರಿಯವರನ್ನು ಮಂಗಳೂರು ನಗರದ ಪೆÇಲೀಸ್ ಆಯುಕ್ತರು ತಲಾ 5000 ರೂ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದರು.

 

LEAVE A REPLY