ಬರುತ್ತದೆ ಆಪ್ತಮಿತ್ರ 2

ಕನ್ನಡ ಚಿತ್ರರಂಗದ ಮೈಲಿಗಲ್ಲಿನ ಸಿನಿಮಾಗಳಲ್ಲಿ `ಆಪ್ತಮಿತ್ರ’ ಕೂಡಾ ಒಂದು. ಡಾ ವಿಷ್ಣುವರ್ಧನ್, ಸೌಂದರ್ಯ, ರಮೇಶ್ ಅಭಿನಯಿಸಿರುವ ಈ ಸಿನಿಮಾ ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಿತ್ತು.  ಈಗ 13 ವರ್ಷಗಳ ಬಳಿಕ ಮತ್ತೆ ಕನ್ನಡದಲ್ಲಿ `ಆಪ್ತಮಿತ್ರ 2′ ಚಿತ್ರ ಬರಲಿದೆ. ವಿಶೇಷವೆಂದರೆ `ಆಪ್ತಮಿತ್ರ’ ಮತ್ತು `ಆಪ್ತರಕ್ಷಕ’ ಚಿತ್ರವನ್ನು ನಿರ್ದೇಶಿಸಿದ್ದ ಪಿ.ವಾಸುವೇ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ರಮೇಶ್ ಯಾದವ್ `ಆಪ್ತಮಿತ್ರ 2′ ಚಿತ್ರದ ನಿರ್ಮಾಪಕ.

ಅಂದ ಹಾಗೆ ಈ ಸಿನಿಮಾ ತಮಿಳಿನ ಹಾರರ್ ಚಿತ್ರ `ಅರನ್ಮನೈ’ ರಿಮೇಕ್. ತಮಿಳಿನ ಈ ಚಿತ್ರವನ್ನು ಖುಷ್ಬು ಪತಿ ಸುಂದರ್ ಸಿ  ನಟಿಸಿ ನಿರ್ದೇಶನ ಮಾಡಿದ್ದರು. `ಆಪ್ತಮಿತ್ರ 2′ ಚಿತ್ರದ ನಾಯಕ, ನಾಯಕಿ ಹಾಗೂ ಇತರ ಪಾತ್ರವರ್ಗದಲ್ಲಿ ಯಾರ್ಯಾರಿರುತ್ತಾರೆ ಎನ್ನುವ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಸಿನಿಮಾ ನವೆಂಬರಿನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.