ಕಾಲೇಜು ವಿದ್ಯಾರ್ಥಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬೈಂದೂರು : ಇಲ್ಲಿನ ಬಿಜೂರು ಗ್ರಾಮದ ಕಂಚಿಕಾನಿನ ಕಾಲೇಜು ವಿದ್ಯಾರ್ಥಿ ಸೃಜನ್ ಎಂಬಾತನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ಸೃಜನ್, ಇವತ್ತು ತರಗತಿ ನಡೆಯುವುದಿಲ್ಲ ಎಂದು ಮನೆ ಮಂದಿಯಲ್ಲಿ ಹೇಳಿ, ಸಂಜೆ ತನಕ ಪರಿಸರದಲ್ಲಿ ತಿರುಗಾಡಿಕೊಂಡಿದ್ದ. ರಾತ್ರಿಯಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಆತಂಕಗೊಂಡ ಮನೆ ಮಂದಿ ಹುಡುಕಾಡಲು ಶುರು ಮಾಡಿದಾಗ ಈತನ ಶವ ಮನೆ ಪಕ್ಕದ ವಾಸ್ತವ್ಯವಿರದ ಮನೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ನಿಗೂಢರೀತಿಯಲ್ಲಿ ಪತ್ತೆಯಾಗಿದೆ.

ಕಟ್ಟೆಮನೆ ಮುಡೂರ ಪೂಜಾರಿ ಮತ್ತು ಲಕ್ಷ್ಮೀ ದಂಪತಿ ನಾಲ್ಕು ಮಕ್ಕಳಲ್ಲಿ ಸೃಜನ್ ಕೊನೆಯ ಪುತ್ರನಾಗಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ನಡೆಸಿ ಮನೆಯವರಿಗೆ ಹಸ್ತಾಂತರಿಸಲಾಯಿತು